Connect with us

    LATEST NEWS

    ಕೊಟ್ಟಾಯಂನಲ್ಲಿ ಭೀಕರ ರಸ್ತೆ ಅಪಘಾತ,ತಾಯಿ ಮಡಿಲಲ್ಲೇ ಉಸಿರು ಚೆಲ್ಲಿದ ಮಗು..!

    ಕೊಟ್ಟಾಯಂ :ಕೇರಳದ ಕೊಟ್ಟಾಯಂನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 2 ವರ್ಷದ ಕಂದಮ್ಮ ಮೃತಪಟ್ಟಿದ್ದಾಳೆ. ಕೊಟ್ಟಾಯಂ (kottayam) ಪಾದಪ್ಪರಂನಲ್ಲಿ ಕಾರು ಮತ್ತು ಟ್ಯಾಂಕರ್ ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ತಾಯಿಯ ಮಡಿಲಲ್ಲಿ ಕುಳಿತಿದ್ದ ಎರಡು ವರ್ಷದ ಬಾಲಕಿ ದಾರುಣ ಅಂತ್ಯ ಕಂಡಿದ್ದಾಳೆ.

     

    ಪೊನ್ಮಳ ಚಾಪನಂಗಡಿ ದಕ್ಷಿಣದಲ್ಲಿ ನಾಸೀರ್ ಮತ್ತು ರಮಶೀನಾ ದಂಪತಿಯ ಪುತ್ರಿ ಇಫಾ ಮೃತ ಬಾಲಕಿಯಾಗಿದ್ದಾಳೆ. ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದ ಕಾರು ಮತ್ತು ಎದುರಿನಿಂದ ಬಂದ ಟ್ಯಾಂಕರ್ ಲಾರಿ ಡಿಕ್ಕಿಯಾದಾಗ, ಏರ್ ಬ್ಯಾಗ್ ಬಾಲಕಿಯ ಮುಖಕ್ಕೆ ಬಡಿದು ಸೀಟ್‌ಬೆಲ್ಟ್ ಕುತ್ತಿಗೆಗೆ ಸಿಕ್ಕಿಹಾಕಿಕೊಂಡ ಪರಿಣಾಮ, ಬಾಲಕಿ ಉಸಿರುಗಟ್ಟಿ ಮೃತಪಟ್ಟಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಾಲಕಿಯ ತಂದೆ ಕೇವಲ ಎರಡು ದಿನಗಳ ಹಿಂದೆ ವಿದೇಶದಿಂದ ಬಂದಿದ್ದರು. ಭಾನುವಾರ ಬಾಲಕಿಯ ಪಿತೃಸೋದರನ ಮದುವೆ ನಡೆಯಬೇಕಿತ್ತು. ಈ ದುರಂತದಿಂದ ಕುಟುಂಬಸ್ಥರು ಶೋಕಸಾಗರದಲ್ಲಿ ಮುಳುಗಿದ್ದಾರೆ. ಅಪಘಾತದಲ್ಲಿ ಬೇರೆ ಯಾರಿಗೂ ಗಾಯಗಳಾಗಿಲ್ಲ.
    ಕೊಳ್ಳತ್ತೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply