LATEST NEWS
ಉಡುಪಿ – ಗ್ರಾನೈಟ್ ಮೈಮೇಲೆ ಬಿದ್ದು ಇಬ್ಬರು ಕಾರ್ಮಿಕರ ದಾರುಣ ಸಾವು….!!

ಉಡುಪಿ ಸೆಪ್ಟೆಂಬರ್ 14: ಲಾರಿಯಿಂದ ಗ್ರಾನೈಟ್ ನ್ನು ಅನ್ಲೋಡ್ ಮಾಡುವ ವೇಳೆ ಗ್ರಾನೈಟ್ ಕಾರ್ಮಿಕರ ಮೇಲೆ ಬಿದ್ದು ಇಬ್ಬರು ಸಾವನಪ್ಪಿದ ಘಟನೆ ತೊಟ್ಟಂ ಎಂಬಲ್ಲಿ ಇಂದು ನಡೆದಿದೆ.
ಮೃತರನ್ನು ಒರಿಸ್ಸಾದ ಕಾರ್ಮಿಕರಾದ ಬಾಬುಲ್ಲ(35) ಮತ್ತು ಭಾಸ್ಕರ (35) ಎಂದು ಗುರುತಿಸಲಾಗಿದೆ. ತೊಟ್ಟಂನಲ್ಲಿ ನಿರ್ಮಾಣವಾಗುತ್ತಿರುವ ಮನೆ ಯೊಂದಕ್ಕೆ ಕಂಟೈನರ್ ಲಾರಿಯಲ್ಲಿ ತಂದಿದ್ದ ಗ್ರಾನೈಟ್ ಇಳಿಸುತ್ತಿದ್ದಾಗ ಲಾರಿಯೊಳಗೆ ಗ್ರಾನೈಟ್ ಜಾರಿ ಮೈಮೇಲೆ ಬಿದ್ದಿದೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.