LATEST NEWS
ರಾಷ್ಟ್ರೀಯ ಹೆದ್ದಾರಿಯಲ್ಲಿ ಹ್ಯಾಪಿ ನ್ಯೂ ಇಯರ್ ಬರೆಯಲು ಹೋಗಿ ಪ್ರಾಣ ಕಳೆದುಕೊಂಡ ಯುವಕರು

ಕಾರ್ಕಳ ಜನವರಿ 1 : ರಾಷ್ಟ್ರೀಯ ಹೆದ್ದಾರಿಯಲ್ಲಿ ಹ್ಯಾಪಿ ನ್ಯೂ ಇಯರ್ ಎಂದು ಬರೆಯಲು ಹೋಗಿ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರ ಸಾವನಪ್ಪಿರುವ ಘಟನೆ ನಿನ್ನೆ ರಾತ್ರಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿಯ ಮಿಯಾರು ಬಳಿ ನಡೆದಿದೆ.
ಮೃತಪಟ್ಟವರನ್ನು ಬಾಗಲಕೋಟೆಯ ಶರಣ್ ಮತ್ತು ಸಿದ್ದು ಎಂದು ಗುರುತಿಸಲಾಗಿದೆ. ಹೊಸ ವರ್ಷದ ಮೂಡ್ ನಲ್ಲಿ ಗುರುವಾರ ತಡರಾತ್ರಿ ಹ್ಯಾಪಿ ನ್ಯೂ ಇಯರ್ ಅಂತ ರಸ್ತೆ ಮಧ್ಯೆ ಬರೆದು ಎಲ್ಲರನ್ನೂ ಹೊಸ ವರ್ಷಕ್ಕೆ ಸ್ವಾಗತಿಸಬೇಕು ಅಂತ ಅಂದುಕೊಂಡಿದ್ದರು.

ಅದರಂತೆ ಇವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸ ವರ್ಷಕ್ಕೆ ಸ್ವಾಗತ ಕೋರುವ “ಹ್ಯಾಪಿ ನ್ಯೂ ಇಯರ್” ಎಂದು ರಸ್ತೆಯಲ್ಲಿ ಬರೆಯುತ್ತಿದ್ದಾಗ ಇಕೋ ಕಾರು ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಶರಣ್ ಸ್ಥಳದಲ್ಲೇ ಮೃತಪಟ್ಟರೆ, ಸಿದ್ದು ಆಸ್ಪತ್ರೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾರೆ. ರಸ್ತೆ ಮಧ್ಯೆ ಈ ಯುವಕರು ಒದ್ದಾಡುತ್ತಿರುವುದನ್ನ ಕಂಡು ಚಾಲಕ ಕಾರನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.
ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಚಾಲಕನಿಗಾಗಿ ಹುಡುಕಾಟ ನಡೆದಿದೆ.