LATEST NEWS
ಮಂಗಳೂರು ಪೌರತ್ವ ಮಸೂದೆ ಪ್ರತಿಭಟನೆ ಘರ್ಷಣೆಯಲ್ಲಿ ಇಬ್ಬರು ಸಾವು

ಮಂಗಳೂರು ಪೌರತ್ವ ಮಸೂದೆ ಪ್ರತಿಭಟನೆ ಘರ್ಷಣೆಯಲ್ಲಿ ಇಬ್ಬರು ಸಾವು
ಮಂಗಳೂರು ಡಿಸೆಂಬರ್ 19: ಮಂಗಳೂರಿನಲ್ಲಿ ಇಂದು ನಡೆದ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆಯಲ್ಲಿ ನಡೆದ ಗಲಾಟೆಯಲ್ಲಿ ಇಬ್ಬರು ಸಾವನಪ್ಪಿದ್ದಾರೆ. ಮೃತರನ್ನು ಜಲೀಲ್ ಕಂದಕ್(49), ನೌಶೀನ್ ಕುದ್ರೋಳಿ(23) ಎಂದು ಗುರುತಿಸಲಾಗಿದೆ.
ಬಂದರು ಠಾಣಾ ವ್ಯಾಪ್ತಿಯಲ್ಲಿ ನಡೆದ ಪೊಲೀಸರು ಹಾಗೂ ಕಿಡಿಗೇಡಿಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಸುಮಾರು 7 ಸಾವಿರಕ್ಕೂ ಅಧಿಕ ಕಿಡಿಗೇಡಿಗಳು ಬಂದರು ಠಾಣೆಗೆ ಬೆಂಕಿ ಹಚ್ಚಲು ಆಗಮಿಸಿದ್ದ ಸಂದರ್ಭ ಪೊಲೀಸರು ಹಾಗೂ ಕಿಡಿಗೇಡಿಗಳ ನಡುವೆ ಘರ್ಷಣೆ ಏರ್ಪಟ್ಟಿತ್ತು. ಈ ಸಂದರ್ಭದಲ್ಲಿ ಪೊಲೀಸರು ಉದ್ರಿಕ್ತ ಕಿಡಿಗೇಡಿಗಳನ್ನು ಚದುರಿಸಲು ಬಲ ಪ್ರಯೋಗ ಮಾಡಿದ್ದರು. ಈ ಸಂದರ್ಭ ಸುಮಾರು 20 ಕ್ಕೂ ಅಧಿಕ ಪೊಲೀಸರು ಗಾಯಗೊಂಡಿದ್ದು, 8 ಮಂದಿ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ.