Connect with us

    LATEST NEWS

    ಪೋಶೆ ಅಪಘಾತ ಪ್ರಕರಣಕ್ಕೆ ತಿರುವು: ಕಾರು ಚಲಾಯಿಸಿದ್ದು ಮಗನಲ್ಲ ಎಂದ ಆರೋಪಿಯ ತಂದೆ

    ಪುಣೆ, ಮೇ 24: ಐಶಾರಾಮಿ ಕಾರು ‘ಪೋಶೆ’ ಅಪಘಾತ ಪ್ರಕರಣದಲ್ಲಿ ಆರೋಪಿಯಾಗಿರುವ ಬಾಲಕನ ತಂದೆ, ಅಪಘಾತ ಸಂಭವಿಸಿದಾಗ ಕಾರು ಚಲಾಯಿಸಿಸುತ್ತಿದ್ದದ್ದು ತಮ್ಮ ಮಗನಲ್ಲ. ಮನೆಯ ಕಾರು ಚಾಲಕ ಎಂದು ಹೇಳಿಕೆ ನೀಡಿದ್ದಾರೆ.

    ಪುಣೆಯ ಕಲ್ಯಾಣಿ ನಗರದಲ್ಲಿ ಬೈಕ್‌ಗೆ ಕಾರು ಡಿಕ್ಕಿಯಾಗಿ ಇಬ್ಬರು ಟೆಕಿಗಳು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೆ ಸಿಲುಕಿರುವ (ಸಿಸಿಎಲ್‌) 17 ವರ್ಷದ ಬಾಲಕ, ಪಾನಮತ್ತನಾಗಿ ಕಾರು ಚಲಾಯಿಸಿ ಅಪಘಾತ ಮಾಡಿದ ಆರೋಪ ಎದುರಿಸುತ್ತಿದ್ದಾನೆ.

    ಭಾನುವಾರ ರಾತ್ರಿ ಅಪಘಾತ ಸಂಭವಿಸಿದಾಗ ಆರೋಪಿಯ ಜೊತೆಗಿದ್ದ ಸ್ನೇಹಿತ ಮತ್ತು ಕುಟುಂಬದ ಕಾರು ಚಾಲಕನನ್ನು ಪೊಲೀಸರು ಗುರುವಾರ ವಿಚಾರಣೆಗೆ ಒಳಪಡಿಸಿದ್ದಾರೆ. ಬಾಲಕನ ತಾತನನ್ನೂ ವಿಚಾರಣೆ ನಡೆಸಲಾಗಿದೆ.

    ‘ಅಪಘಾತ ಸಂಭವಿಸಿದಾಗ ಕಾರು ಚಾಲನೆ ಮಾಡುತ್ತಿದ್ದುದು ತಾನೇ ಎಂದು ಚಾಲಕ ಮೊದಲ ಹೇಳಿಕೆ ನೀಡಿದ್ದಾನೆ. ಆರೋಪಿಯ ತಂದೆಯೂ ಅದನ್ನೇ ಹೇಳಿದ್ದಾರೆ. ಕಾರು ಓಡಿಸುತ್ತಿದ್ದದ್ದು ಚಾಲಕನೇ’ ಎಂದು ಅವರು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *