LATEST NEWS
ತುಮಕೂರು – ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ ಮೂವರು ಸ್ಥಳದಲ್ಲೇ ಸಾವು
ತುಮಕೂರು ಜನವರಿ 07: ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನಪ್ಪಿದ ಘಟನೆ ತುಮಕೂರು ತಾಲ್ಲೂಕಿನ ಕೋರ ಹತ್ತಿರದ ಓಬಳಾಪುರ ಗೇಟ್ ಬಳಿ ಮುಂಜಾನೆ ನಡೆದಿದೆ.
ಮಧುಗಿರಿ ತಾಲ್ಲೂಕಿನ ಪುರವರ ಹೋಬಳಿ ಗೊಂದಿಹಳ್ಳಿ ಗ್ರಾಮದ ಮಮ್ರಾಜ್ (38) ಶಾಖೀರ್ ಹುಸೇನ್ (48), ಮಹ್ಮದ್ ಆಸೀಫ್ (12) ಮೃತರು. ತುಮಕೂರಿನಿಂದ ಮಧುಗಿರಿ ಕಡೆಗೆ ಹೋಗುವಾಗ ರಸ್ತೆಯಲ್ಲಿ ಮುಂದೆ ಸಾಗುತ್ತಿದ್ದ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.