Connect with us

KARNATAKA

ತುಮಕೂರು : ಮಂಗಳಮುಖಿ ಪ್ರೇಯಸಿಗೆ ಚಾಕು ಇರಿದ ಭಗ್ನ ಪ್ರೇಮಿ..!

ತುಮಕೂರು, ಆಗಸ್ಟ್ 30 : ಮದುವೆಯಾಗಲು ನಿರಾಕರಿಸಿದ ಮಂಗಳಮುಖಿ ಪ್ರೇಯಸಿಗೆ ಭಗ್ನ ಪ್ರೇಮಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಕುಣಿಗಲ್‌ ಪಟ್ಟಣದ ಗ್ರಾಮ ದೇವತೆ ಸರ್ಕಲ್‌ ಬಳಿ ನಡೆದಿದೆ.

ಭಗ್ನ ಪ್ರೇಮಿಯಿಂದ ಚಾಕು ಇರಿತಕ್ಕೆ ಒಳಗಾದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕುಣಿಗಲ್ ಪಟ್ಟಣದ ಕೋಟೆ ಪ್ರದೇಶದ ಮಹಮದ್‌ ಆಲೀಸಾ ಖಾದ್ರಿ ಅಲಿಯಾಸ್‌ ಹನೀಶಾ (21) ಚಾಕು ಇರಿತಕ್ಕೆ ಒಳಗಾದ ಪ್ರೇಯಸಿ. ಮಂಡ್ಯ ಮೂಲದ ಆದಿಲ್‌ (23) ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಪ್ರಿಯಕರ ಇದೀಗ ಆರೋಪಿ ಪೊಲೀಸರ ಅಥಿತಿಯಾಗಿದ್ದಾನೆ.
ಕಳೆದ ಆರೇಳು ತಿಂಗಳ ಹಿಂದೆ ಹನೀಶಾ ಹಾಗೂ ಆದಿಲ್‌ ಸ್ನೇಹ ಫೇಸ್‌ಬುಕ್‌ನಲ್ಲಿ ಶುರುವಾಗಿತ್ತು. ಬಳಿಕ ಆದಿಲ್‌, ಕುಣಿಗಲ್‌ನ ಕೋಟೆಯಲ್ಲಿ ಇರುವ ಹನೀಶಾ ಮನೆಗೆ ಬಂದಿದ್ದ. ನನಗೆ ತಂದೆ, ತಾಯಿ ಯಾರೂ ಇಲ್ಲ. ನಾನೊಬ್ಬ ಅನಾಥ ಎಂದು ಹೇಳಿದ್ದ ಆದಿಲ್, ಹನೀಶಾ ಅವರ ಮನೆಯಲ್ಲೇ ಕಳೆದ ನಾಲ್ಕೈದು ತಿಂಗಳಿಂದ ವಾಸವಿದ್ದ. ಕುಟುಂಬ ನಿರ್ವಹಣೆಯನ್ನು ಆತನೇ ಮಾಡುತ್ತಿದ್ದ ಎನ್ನಲಾಗಿದೆ. ಈ ಮಧ್ಯೆ ಒಬ್ಬರನೊಬ್ಬರು ಪ್ರೀತಿಸಿ, ಮದುವೆಯಾಗಲು ತಿರ್ಮಾನಿಸಿದ್ದಾರೆ. ಆದರೆ, ಕೆಲ ವಿಚಾರವಾಗಿ ಗಲಾಟೆಯಾಗಿ, ಹನೀಶಾಳನ್ನು ಎಲ್ಲೂ ಕೆಲಸಕ್ಕೆ ಹೋಗದಂತೆ ಆದಿಲ್ ತಡೆದಿದ್ದ. ಈ ವಿಚಾರಕ್ಕೆ ಹನೀಶಾ ಮೇಲೆ ಹಲ್ಲೆ ನಡೆಸಿ, ಮಂಡ್ಯಗೆ ಹೋಗಿದ್ದ ಎನ್ನಲಾಗಿದೆ.
ಬುಧವಾರ ಕುಣಿಗಲ್‌ಗೆ ಬಂದ ಆದಿಲ್‌, ಕರೆ ಮಾಡಿ ಮಾತನಾಡೋಣ ಬಾ ಎಂದು ಗ್ರಾಮ ದೇವತೆ ಸರ್ಕಲ್‌ ಬಳಿ ಹನೀಶಾಳನ್ನು ಕರೆಸಿಕೊಂಡಿದ್ದಾನೆ. ಫೋನ್‌ ವಿಚಾರವಾಗಿ ಜಗಳ ಮಾಡಿಕೊಂಡು, ಏಕಾಏಕಿ ಚಾಕುವಿನಿಂದ ಹನೀಶಾ ಹೊಟ್ಟೆಗೆ ಇರಿದು, ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಆತನನ್ನು ಹಿಂಬಾಲಿಸಿದ ಪುರಸಭಾ ಸದಸ್ಯ ರಂಗಸ್ವಾಮಿ ಮತ್ತು ಅವರ ಸ್ನೇಹಿತರು ಆರೋಪಿಯನ್ನು ದೊಡ್ಡ ಪೇಟೆ ರಸ್ತೆ ಬಳಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆನ್ನಟ್ಟಿದ ಪುರ ಸಭಾ ಸದಸ್ಯ ರಂಗಸ್ವಾಮಿ, ಆರೋಪಿಯನ್ನು ಹಿಡಿಯುವ ವೇಳೆ ಬಿದ್ದು ಗಾಯಗೊಂಡಿದ್ದಾರೆ.ತೀವ್ರವಾಗಿ ಗಾಯಗೊಂಡ ಹನೀಶಾಳನ್ನು ಪಟ್ಟಣದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಆದಿಚುಂಚನಗಿರಿ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ. ಸಿಪಿಐ ನವೀನ್‌ ಗೌಡ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *