LATEST NEWS
ಏಕಕಾಲದಲ್ಲಿ ಬರೋಬ್ಬರಿ 9 ಗುಳಿಗಗಳ ಅಬ್ಬರ..ಅಚ್ಚರಿಯಲ್ಲಿ ಭಕ್ತರು….

ಏಕಕಾಲದಲ್ಲಿ ಬರೋಬ್ಬರಿ 9 ಗುಳಿಗಗಳ ಅಬ್ಬರ..ಅಚ್ಚರಿಯಲ್ಲಿ ಭಕ್ತರು….
ಬೆಳ್ತಂಗಡಿ ಫೆಬ್ರವರಿ 8: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೈವರಾಧನೆಗೆ ತನ್ನದೇ ಆದ ಮಹತ್ವವಿದೆ.. ದೈವರಾಧನೆ ಬಗ್ಗೆ ಕರಾವಳಿಯ ಜನರಿಗೆ ನಂಬಿಕೆ ಜಾಸ್ತಿ. ಹೀಗಾಗಿ ಪ್ರತಿ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ದೈವಾರಾಧನೆಯ ಸೇವೆಗಳು ನಡೆಯುತ್ತದೆ.ಆದ್ರೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದಲ್ಲಿರುವ ಬರ್ಕಜೆ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷವಾಗಿ ದೈವ ನೇಮೋತ್ಸವ ನಡೆದಿದೆ.
ತುಳುನಾಡಿನ ಕಾರಣಿಕ ಶಕ್ತಿಯಾದ ಗುಳಿಗ ದೈವಗಳಿಗೆ ನೇಮೋತ್ಸವ ನಡೆದಿದೆ..ಬೇರೆ ಕಡೆಗಳಲ್ಲಿ ಒಂದು ಅಥವಾ ಎರಡು ಗುಳಿಗ ದೈವಗಳಿಗೆ ನರ್ತನಸೇವೆ ನಡೆದ್ರೆ ವೇಣೂರಿನಲ್ಲಿ ಏಕಕಾಲದಲ್ಲೇ 9 ಗುಳಿಗನಿಗೆ ಗಗ್ಗರ ಸೇವೆ ನಡೆಯಿತು.

ಬರ್ಕಜೆ ಕ್ಷೇತ್ರದಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವಿಯ ಧೂತನಾಗಿ ಗುಳಿಗ ನೆಲೆಸಿದ್ದಯ ಇಲ್ಲಿ ನಡೆಯುವ ವಾರ್ಷಿಕ ಉತ್ಸವದಲ್ಲಿ ನವಧೂತನಾಗಿ ಭಕ್ತರಿಗೆ ಈ ದೈವ ದರ್ಶನ ನೀಡಿದ್ದಾನೆ.
ಗಗ್ಗರ ಸೇವೆಯ ಸಂದರ್ಭದಲ್ಲಿ ಬರೋಬ್ಬರಿ 9 ಗುಳಿಗನ ಅಬ್ಬರ ನೋಡಿ ಭಕ್ತರು ಅಚ್ಚರಿ ವ್ಯಕ್ತಪಡಿಸಿದ್ದಾರೆ…ಶಿವನ ಅಂಶವಾಗಿರುವ ಗುಳಿಗ ದೈವ ರೋಷಾವೇಶದಿಂದ ಕೂಡಿದ ಶಕ್ತಿಯಾಗಿದ್ದು,ಭಕ್ತಿಯಿಂದ ಪೂಜಿಸಿದವರ ಅಭೀಷ್ಠೆಗಳನ್ನು ನೆರವೇರಿಸುತ್ತಾನೆ ಎಂಬ ನಂಬಿಕೆ ತುಳುನಾಡಿನಲ್ಲಿದೆ