Connect with us

DAKSHINA KANNADA

ರಾಜಕಾರಣಿಗಳಿಂದ ಆಗದ ಕೆಲಸ ಮಾಡಿದ ಗೂಗಲ್ ….ತುಳು ಭಾಷೆಗೆ ಸ್ಥಾನ ನೀಡಿದ ವಿಶ್ವದ ದೈತ್ಯ ಕಂಪೆನಿ ಗೂಗಲ್

ಮಂಗಳೂರು ಜೂನ್ 29: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವುದು ಮತ್ತು ಅಧಿಕೃತ ಭಾಷೆ ಸ್ಥಾನಮಾನ ಬೇಡಿಕೆಯನ್ನು ನಮ್ಮ ಸರ್ಕಾರಗಳಿಗೆ ಈಡೇರಿಸಲು ಇನ್ನೂ ಸಾಧ್ಯವಾಗಿಲ್ಲ. ಆದರೆ ಜಗತ್ತಿನ ದೈತ್ಯ ಸಂಸ್ಥೆ ಗೂಗಲ್ ತುಳುವಿಗೆ ಸ್ಥಾನ ನೀಡಿದೆ. ಇದೇ ಮೊದಲ ಬಾರಿಗೆ ಗೂಗಲ್ ಟ್ರಾನ್ಸ್‌ಲೇಟ್‌ನಲ್ಲಿ ತುಳು ಭಾಷೆ ಸೇರ್ಪಡೆಗೊಂಡಿದೆ. ಮುಖ್ಯವಾಗಿ, ಇನ್ಮುಂದೆ ತುಳುವೇತರರೂ ತುಳು ಭಾಷೆ ಕಲಿಯಲು ಇದು ಪ್ರೇರಣೆ ನೀಡಲಿದೆ. ಯಾರ ಸಹಾಯವೂ ಇಲ್ಲದೆ ತುಳುವಿನ ಪದ ಬಳಕೆಯನ್ನು ಇದರಲ್ಲಿ ಅರ್ಥ ಮಾಡಿಕೊಳ್ಳಬಹುದು.

ತುಳುವಿಗೆ ಸ್ಥಾನಮಾನ ಕೊಡಲು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಹಿಂದೇಟು ಹಾಕುತ್ತಿದ್ದರೆ.  ಜಾಗತಿಕ ಕಂಪೆನಿಯಿಂದ ತುಳುವಿಗೆ ಮನ್ನಣೆ ಟ್ರಾನ್ಸ್‌ಲೇಟ್‌ಗೆ ಸೇರಿಸಿರುವುದಾಗಿ ಗೂಗಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅದರಲ್ಲಿ ತುಳು ಭಾಷೆಯೂ ಒಳಗೊಂಡಿದೆ.

ಗೂಗಲ್ ಟ್ರಾನ್ಸ್‌ಲೇಟ್‌ನಲ್ಲಿ ತುಳು ಭಾಷೆ ಸೇರ್ಪಡೆಗೊಂಡಿರುವುದು ತುಳು ಭಾಷೆಗೆ ಜಾಗತಿಕವಾಗಿ ಸಂದ ಗೌರವವಾಗಿದೆ. ತುಳುವರು ಸಂಭ್ರಮಪಡುವಂಥ ವಿಚಾರ ಇದು. ಗೂಗಲ್ ಟ್ರಾನ್ಸ್‌ಲೇಟ್‌ನಲ್ಲಿ ಕೆಲವು ಸಂದರ್ಭದಲ್ಲಿ ಶಬ್ದಗಳು ತಪ್ಪಾಗಿ ಉಲ್ಲೇಖವಾಗುವುದು ಸಾಮಾನ್ಯ ವಿಚಾರ. ಇಂತಹ ಸಂದರ್ಭಗಳಲ್ಲಿ ಅಲ್ಲೇ ಇರುವ ಫೀಡ್ ಬ್ಯಾಕ್ ಕಾಲಂನಲ್ಲಿ ಸರಿಯಾದ ಶಬ್ದವನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದರೆ ಗೂಗಲ್ ಅದನ್ನು ಮುಂದಕ್ಕೆ ಸರಿ ಮಾಡಿಕೊಳ್ಳುತ್ತದೆ.

ಈ ಅಂಶವನ್ನು ತುಳುವರು ಸಮರ್ಪಕವಾಗಿ ಬಳಸಿಕೊಂಡರೆ ತುಳುವರಿಗೆ ಹಾಗೂ ತುಳುವೇತರರಿಗೂ ಪ್ರಯೋಜನವಾಗಲಿದೆ. ಒಟ್ಟಾರೆ ಕೇವಲ ವೋಟ್ ಗಾಗಿ ತುಳು ಭಾಷೆಯ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳ ನಡುವೆ ವಿಶ್ವದ ದೈತ್ಯ ಕಂಪೆನಿ ತುಳು ಭಾಷೆಗೆ ನೀಡಿದ ಸ್ಥಾನಮಾನ ನಿಜಕ್ಕೂ ಗ್ರೇಟ್.

Share Information
Continue Reading
Advertisement
Click to comment

Leave a Reply

Your email address will not be published. Required fields are marked *