DAKSHINA KANNADA
ತುಳು ರಂಗಭೂಮಿ ಕಲಾವಿದ ಸುರೇಶ್ ವಿಟ್ಲ ವಿಧಿವಶ

ವಿಟ್ಲ ಎಪ್ರಿಲ್ 06: ತುಳು ರಂಗಭೂಮಿ ಕಲಾವಿದ ಸುರೇಶ್ ವಿಟ್ಲ(45) ಕುಸಿದು ಬಿದ್ದು ನಿಧನರಾಗಿದ್ದಾರೆ. ವಿಟ್ಲ ಸೆರಾಜೆ ನಿವಾಸಿ ತುಳು ರಂಗಭೂಮಿ ಲಾವಿದ, ಶಾರದಾ ಆರ್ಟ್ಸ್ ಮಂಜೇಶ್ವರ ತಂಡದ ಹೆಮ್ಮೆಯ ಕಲಾವಿದ ಸುರೇಶ್ ವಿಟ್ಲ ಮನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅವರು ಸಾವನಪ್ಪಿದ್ದಾರೆ.
ರಂಗಭೂಮಿಯಲ್ಲಿ ಸಾಕಷ್ಟು ಹೆಸರುಗಳಿರುವ ಸುರೇಶ್ ವಿಟ್ಲರವರು ರಂಗಭೂಮಿಯಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರು ಪತ್ನಿ ಒಬ್ಬ ಗಂಡು ಮಗನನ್ನು ಅಗಲಿದ್ದಾರೆ.ವಿಟ್ಲ ಜನತೆ ಕಲಾವಿದ ಸುರೇಶ್ ವಿಟ್ಲ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

1 Comment