LATEST NEWS
ರಷ್ಯಾ – ಕಮ್ಚಟ್ಕಾ ದ್ವೀಪದಲ್ಲಿ ಭೂಕಂಪ – ಭೀಕರ ಸುನಾಮಿ ಎಚ್ಚರಿಕೆ

ರಷ್ಯಾ ಜುಲೈ 30: ರಷ್ಯಾದ ಪೂರ್ವ ಭಾಗದ ಕಮ್ಚಟ್ಕಾ ದ್ವೀಪದಲ್ಲಿ ಬುಧವಾರ 8.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು,ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಅಮೆರಿಕ, ಜಪಾನ್ ಸೇರಿದಂತೆ ಸಮೀಪದ ಇತರ ದೇಶಗಳಿಗೆ ಪೆಸಿಫಿಕ್ ಮಹಾಸಾಗರದ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಭೂಕಂಪದ ಪರಿಣಾಮವಾಗಿ ಹಲವು ಜನರನ್ನು ಸ್ಥಳಾಂತರಿಸಲಾಗಿದ್ದು, ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾದಲ್ಲಿ ಸುನಾಮಿ ಎದ್ದಿರುವ ಬೆನ್ನಲ್ಲೇ ಅಮೆರಿಕ, ಜಪಾನ್ ಮತ್ತು ಹತ್ತಿರದ ಇತರ ದೇಶಗಳಿಗೆ ಪೆಸಿಫಿಕ್ ಮಹಾಸಾಗರದ ಸುನಾಮಿ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಭೂಕಂಪವು 19.3 ಕಿಲೋಮೀಟರ್ (12 ಮೈಲುಗಳು) ಆಳದಲ್ಲಿ ಸಂಭವಿಸಿದೆ. ಇದು ಅವಾಚಾ ಕೊಲ್ಲಿಯಲ್ಲಿರುವ ಸುಮಾರು 1,65,000 ಜನಸಂಖ್ಯೆಯನ್ನು ಹೊಂದಿರುವ ಕರಾವಳಿ ನಗರವಾದ ಪೆಟ್ರೋಪಾವ್ಲೋವ್ಸ್ಕ್-ಕಾಮ್ಚಾಟ್ಸ್ಕಿಯಿಂದ ಸುಮಾರು 125 ಕಿಲೋಮೀಟರ್ (80 ಮೈಲುಗಳು) ಪೂರ್ವ-ಆಗ್ನೇಯದಲ್ಲಿದೆ. ಇದು ಭೂಕಂಪನದ ಕೇಂದ್ರ ಬಿಂದುವಾಗಿದ್ದು, 8.0 ರಿಂದ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ಹೇಳಿದೆ.
ಭೂಕಂಪದ ನಂತರ, ಕಮ್ಚಟ್ಕಾ ಪ್ರದೇಶದ ಕೆಲವು ಭಾಗಗಳಲ್ಲಿ 3 ರಿಂದ 4 ಮೀಟರ್ ಎತ್ತರದ ಅಲೆಗಳ ಸುನಾಮಿ ದಾಖಲಾಗಿದೆ ಎಂದು ರಷ್ಯಾದ ತುರ್ತು ಪರಿಸ್ಥಿತಿಗಳ ಪ್ರಾದೇಶಿಕ ಸಚಿವರು ತಿಳಿಸಿದ್ದಾರೆ. ಜನರು ಕರಾವಳಿಯಿಂದ ದೂರ ಹೋಗಬೇಕೆಂದು ಸಲಹೆ ನೀಡಲಾಗಿದೆ. ಕಮ್ಚಟ್ಕಾ ಪ್ರದೇಶದ ರಾಜಧಾನಿಯಲ್ಲಿ ವಿದ್ಯುತ್ ಕಡಿತ ಮತ್ತು ಮೊಬೈಲ್ ಫೋನ್ ಸೇವಾ ವೈಫಲ್ಯ ಕಡಿತವಾಗಿದೆ. ಯಾವುದೇ ತುರ್ತು ಸಂದರ್ಭದಲ್ಲಿ ಮಾಹಿತಿ ಸಂಗ್ರಹಣೆ ಮತ್ತು ಪ್ರತಿಕ್ರಿಯೆಗಾಗಿ ಜಪಾನ್ ಸರ್ಕಾರವು ಒಂದು ಕಾರ್ಯಪಡೆಯನ್ನು ಸ್ಥಾಪಿಸಿದೆ ಎಂದು ಹೇಳಿದೆ.