LATEST NEWS
ನಾಲ್ಕು ಜನರನ್ನು ಕೊಲೆ ಮಾಡಿದ 16 ವರ್ಷದ ಡ್ರಗ್ ಎಡಿಕ್ಟ್ ಬಾಲಕ

ಅಗರ್ತಲಾ ನವೆಂಬರ್ 06: ಮಾದಕ ವಸ್ತುಗಳಿಗೆ ದಾಸವಾಗಿದ್ದ ಬಾಲಕನೊಬ್ಬ ನಾಲ್ಕು ಜನರನ್ನು ಹತ್ಯೆ ಮಾಡಿರುವ ಘಟನೆ ತ್ರಿಪುರಾದ ಧಲಾಯಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಸದ್ಯ 16 ವರ್ಷದ ಬಾಲಕನೊಬ್ಬನನ್ನು ವಶಕ್ಕೆ ಪಡೆಯಲಾಗಿದೆ. ಕಮಲಾಪುರ ಉಪವಿಭಾಗ ವ್ಯಾಪ್ತಿಯ ನಿವಾಸಿಯಾದ ಈ ಬಾಲಕ ನಿತ್ಯವೂ ಮಾದಕವಸ್ತು ಸೇವಿಸುತ್ತಿದ್ದುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಶನಿವಾರ ಬೆಳಿಗ್ಗೆ ಈತನ ತಂದೆ ಮನೆಯಲ್ಲಿ ಇಲ್ಲದ ವೇಳೆ ತನ್ನ ತಾಯಿ, ತಾತ, 10 ವರ್ಷದ ತಂಗಿ ಮತ್ತು ನೆರೆ ಮನೆಯ ವ್ಯಕ್ತಿಯನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಹತ್ಯೆ ಯಾವ ಕಾರಣಕ್ಕಾಗಿ ನಡೆದಿದೆ ಎಂಬುದು ತಿಳಿದುಬಂದಿಲ್ಲ ಎಂದರು.

ಘಟನೆ ಬಳಿಕ ಬಾಲಕನ ತಂದೆ ಮರಳಿ ಬಂದಾಗ ಮನೆಯಲ್ಲಿ ರಕ್ತ ಚೆಲ್ಲಿತ್ತು. ಮೃತ ದೇಹಗಳನ್ನು ಮನೆಯ ಪಕ್ಕದಲ್ಲೇ ಇರುವ ಬಾವಿಯಲ್ಲಿ ಎಸೆಯಲಾಗಿತ್ತು. ತಕ್ಷಣವೇ ಬಂಧಿತನ ತಂದೆ, ಊರಿನ ಜನರಿಗೆ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದೂ ಅವರು ಹೇಳಿದರು.