Connect with us

    LATEST NEWS

    ಉಡುಪಿ: ಪತ್ನಿಗೆ ಏಕಾಏಕಿ ತಲಾಖ್ ಕೊಟ್ಟು, 2ನೇ ಮದುವೆ ದೂರು ದಾಖಲು

    ಉಡುಪಿ ಮಾರ್ಚ್ 05: ಮೊದಲನೇ ಹೆಂಡತಿಗೆ ತಲಾಖ್ ನೀಡಿ ಎರಡನೇ ಮದುವೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಸ ಮಾಡಿದ ಪತಿ ಹಾಗೂ ಆತನ ಮನೆಯವರ ವಿರುದ್ದ ದೂರು ದಾಖಲಾಗಿದೆ.


    ಮೊಹಮ್ಮದ್‌ ಯುಸೂಫ್ ಅಂಬಾಗಿಲಿನ ನಿವಾಸಿ ಉಸ್ಮಾನ್‌ ಅವರ ಪುತ್ರಿ ಶೆಹನಾಝ್ ಅವರ ಜೊತೆ 2006ರಲ್ಲಿ ಮದುವೆಯಾಗಿದ್ದು ಅವರಿಗೆ ಗಂಡು ಮಗುವಿದೆ. ಈ ನಡುವೆ ಯೂಸೂಫ್ ಹೆಂಡತಿಗೆ ವರದಕ್ಷಿಣೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದ್ದು, ಇದೀಗ 15 ವರ್ಷ ಸಂಸಾರ ನಡೆಸಿ ಮೊದಲನೇ ಹೆಂಡತಿಗೆ ಏಕಾಏಕಿ ತ್ರಿಬಲ್‌ (ತ್ರಿವಳಿ) ತಲಾಖ್‌ ಕೊಟ್ಟು, ಎರಡನೇ ಮದುವೆಯಾದ ಘಟನೆ ನಡೆದಿದೆ. ಈ ಹಿನ್ನಲೆ ಮೋಸ ಮಾಡಿದ ಪತಿ ಹಾಗೂ ಆತನ ಮನೆಯವರ ವಿರುದ್ಧ ಉಡುಪಿ ಮಹಿಳಾ ಠಾಣೆಯಲ್ಲಿ ನೊಂದ ಮಹಿಳೆ ದೂರು ದಾಖಲಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *