BELTHANGADI
ಟ್ರಕ್ಕಿಂಗ್ ಗೆ ತೆರಳಿ ನಾಪತ್ತೆಯಾಗಿದ್ದ ಟೆಕ್ಕಿ ಪತ್ತೆ
ಬೆಳ್ತಂಗಡಿ ಮೇ 29: ಟ್ರಕ್ಕಿಂಗ್ ತೆರಳಿದ್ದ ವ್ಯಕ್ತಿ ನಾಪತ್ತೆಯಾಗಿದ್ದ ಪ್ರಕರಣ ಸುಖಾಂತ್ಯ ಕಂಡಿದೆ. ಮೂಡಿಗೆರೆ ರಾಣಿಝರಿ ಫಾಲ್ಸ್ ನಿಂದ ಇಳಿದು ಟ್ರಕ್ಕಿಂಗ್ ತೆರಳಿದ್ದ ವ್ಯಕ್ತಿ ನಾಪತ್ತೆಯಾಗಿದ್ದ.
ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಮಹಾರಾಷ್ಟ್ರ ಮೂಲದ ಟೆಕ್ಕಿ ಪರೇಶ್ ಕಿಶಾನ್ ಲಾಲ್ ಅಗರ್ವಾಲ್ ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಈತ ನಿನ್ನೆ ಸಂಜೆ ರಾಣಿ ಝರಿ ಫಾಲ್ಸ್ ಗೆ ತೆರಳಿ ಅಲ್ಲಿಂದ ಟ್ರಕ್ಕಿಂಗ್ ತೆರಳಿದ್ದ. ಇದೀಗ ಪತ್ತೆಯಾದ ಆತ ನನ್ನು ಬಾಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸ್ಥಳೀಯರು ರಾತ್ರಿ ನಡೆಸಿದ ಸಾಹಸಿಕ ಕಾರ್ಯಾಚರಣೆಯಿಂದಾಗಿ ಆತನನ್ನು ರಾತ್ರಿಯೇ ಪತ್ತೆ ಹಚ್ವಿ ಅರಣ್ಯದಿಂದ ಹೊರತರಲು ಸಾದ್ಯವಾಯಿತು. ತಡ ರಾತ್ರಿಯಲ್ಲಿ ಆನೆ ಸೇರಿದಂತೆ ಅಪಾಯಕಾರಿ ಕಾಡು ಪ್ರಾಣಿಗಳಿರುವ ಅತ್ಯಂತ ಅಪಾಯಕಾರಿಯಾಗಿದ್ದ ಅರಣ್ಯದಲ್ಲಿ ಆತ ಒಬ್ಬನೇ ಸಿಲುಕಿಕೊಂಡಿದ್ದ ಒಂದಿಷ್ಟು ತಡವಾದರೂ ಅಪಾಯ ಎದುರಾಗುವ ಸಾಧ್ಯತೆಯಿತ್ತು. ಹುಡುಕಲು ಹೋದವರಿಗೆ ಕಾಡನೆಯೂ ಎದುರಾಗಿರುವುದಾಗಿ ತಿಳಿದು ಬಂದಿದೆ. ಬಾಳೂರು ಪೊಲೀಸರು ಹಾಗೂ ಬೆಳ್ತಂಗಡಿಯ ಅರಣ್ಯ ಇಲಾಖೆ, ಹಾಗೂ ಚಾರ್ಮಾಡಿ ವ್ಯಾಪ್ತಿಯ ಸ್ಥಳೀಯರಾದ ಸಿನಾನ್ ಚಾರ್ಮಾಡಿ, ಮುಬಶ್ಶಿರ್, ಅಶ್ರಫ್ ಎರ್ಮಾಲ ಪಲ್ಕೆ, ಕಾಜೂರಿನ ಶಂಸು, ನಾಸೀರ್ ಹುಡುಕಾಟದಲ್ಲಿ ಕೈ ಜೋಡಿಸಿದರು.
ಎರ್ಮಾಯಿ ಫಾಲ್ಸ್ ಸಮೀಪ ಅರಣ್ಯ ಪ್ರದೇಶದಲ್ಲಿ ಆತನನ್ನು ಪತ್ತೆಹಚ್ವಿರುವ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸೇರಿ ಪತ್ತೆ ಹಚ್ಚಿದ್ದಾರೆ. ಸಂಪೂರ್ಣ ನಿತ್ರಾಣಗೊಂಡಿದ್ದ ಆತನನ್ನು ರಾತ್ರಿ ವೇಳೆ ಹೊತ್ತುಕೊಂಡೇ ಸ್ಥಳೀಯರು ಅರಣ್ಯದಿಂದ ಹೊರಗೆ ತಂದಿದ್ದಾರೆ.