LATEST NEWS
ಮಣಿಪಾಲ ಕೆಎಂಸಿ ಆವರಣದಲ್ಲಿ ಉರುಳಿ ಬಿದ್ದ ಮರ ಇಬ್ಬರಿಗೆ ಗಾಯ

ಮಣಿಪಾಲ ಕೆಎಂಸಿ ಆವರಣದಲ್ಲಿ ಉರುಳಿ ಬಿದ್ದ ಮರ ಇಬ್ಬರಿಗೆ ಗಾಯ
ಉಡುಪಿ ಜೂನ್ 21: ಮಣಿಪಾಲ ಕೆಎಂಸಿ ಆಸ್ಪತ್ರೆಯ ಆವರಣದಲ್ಲಿ ಬೃಹತ್ ಮರವೊಂದು ಉರುಳಿ ಬಿದ್ದು ಇಬ್ಬರು ಗಾಯಗೊಂಡ ಘಟನೆ ನಡೆದಿದೆ.
ಮಣಿಪಾಲ ಆಸ್ಪತ್ರೆಯ ತುರ್ತುಚಿಕಿತ್ಸೆ ಕಟ್ಟಡದ ಮುಂಭಾಗದಲ್ಲೇ ಈ ಮರ ಇದ್ದಿದ್ದು, ಇಂದು ಏಕಾಯೇಕಿ ಉರುಳಿ ಬಿದ್ದಿದೆ. ಕೆಎಂಸಿ ಆಸ್ಪತ್ರೆಯ ಕಟ್ಟಡದ ಮೇಲೆ ಕೂಡಾ ಮರದ ಕೊಂಬೆಗಳು ಬಿದ್ದಿದ್ದು ಸ್ವಲ್ಪಮಟ್ಟಿನ ಹಾನಿಯುಂಟಾಗಿದೆ.

ಬೃಹತ್ ಮರ ಉರುಳಿ ಬಿದ್ದ ಹಿನ್ನಲೆ ಮರದಡಿ ನಿಲ್ಲಿಸಿದ್ದ ನಾಲ್ಕು ಕಾರುಗಳು ಜಖಂ ಆಗಿದ್ದು ಮರದಡಿ ವಿಶ್ರಾಂತಿಗೆ ಕುಳಿತಿದ್ದ ಇಬ್ಬರಿಗೆ ಗಾಯಗಳಾಗಿದೆ.
ಆಸ್ಪತ್ರೆಯೊಳಗೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಕಡೆಯವರು ಇದೇ ಮರದಡಿ ವಿಶ್ರಾಂತಿ ಪಡೆಯುತ್ತಾರೆ. ಕಾರು ಪಾರ್ಕ್ ಮಾಡುತ್ತಾರೆ. ಹೀಗೆ ಮರದ ಅಡಿಯಲ್ಲಿದ್ದ ಇಬ್ಬರಿಗೆ ಗಾಯವಾಗಿದೆ. ಗಾಯಾಳುಗಳನ್ನು ಕೂಡಲೇ ಕೆಎಂಸಿ ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗಿದೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಮರ ಕತ್ತರಿಸಿ ಕಾರುಗಳನ್ನು ತೆರವುಗೊಳಿಸಿದೆ. ಗಾಳಿ ಮಳೆ ಇಲ್ಲದಿದ್ದರೂ, ಆಶ್ಚರ್ಯಕರ ರೀತಿಯಲ್ಲಿ ಮರ ಬಿದ್ದಿದೆ. ಮಣಿಪಾಲ ಆಸ್ಪತ್ರೆ ಆವರಣದಲ್ಲಿ ಕಳೆದ ಹಲವು ವರ್ಷಗಳಿಂದ ಜನರಿಗೆ, ಪಕ್ಷಿಗಳಿಗೆ, ಬಾವಲಿಗಳಿಗೆ ಆಶ್ರಯ ನೀಡಿತ್ತು.
ಮರದಲ್ಲಿ ಸಾವಿರಾರು ಬಾವಲಿಗಳು ಬೀಡು ಬಿಟ್ಟಿದ್ದವು. ಮರ ಬಿದ್ದ ನಂತರ ನೆಲೆ ಕಳೆದುಕೊಂಡ ಬಾವಲಿಗಳು ಆಕಾಶದಲ್ಲೆಲ್ಲಾ ಹಾರಾಟ ಮಾಡುತ್ತಿರುವ ದೃಶ್ಯ ಮನಕಲಕುತ್ತಿತ್ತು. ಅಲ್ಲದೆ ರಸ್ತೆಯಲ್ಲಿ ಕೆಲ ಬಾವಲಿಗಳು ಗಾಯವಾಗಿ ಬಿದ್ದಿದೆ. ಕೆಲ ಬಾವಲಿ ಮರಿಗಳ ರೆಕ್ಕೆಗೆ ಗಾಯವಾಗಿದೆ.
ಸಾಮಾನ್ಯವಾಗಿ ಈ ಮರದ ಕೆಳಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಕುಳಿತಿರುತ್ತಿದ್ದರು. ಮಳೆ ಹಿನ್ನಲೆಯಲ್ಲಿ ಕಡಿಮೆ ಜನ ಕುಳಿತಿದ್ದರು. ಅಲ್ಲದೆ ಆವರಣದ ಒಳಗೆ ಮರ ಬಿದ್ದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದ್ದು, ಒಂದು ವೇಳೆ ರಸ್ತೆಗೆ ಬಿದ್ದಿದ್ದರೆ ಭಾರಿ ಅನಾಹುತವಾಗುವ ಸಂಭವವಿತ್ತು.