LATEST NEWS
ಭಾರಿ ಗಾತ್ರದ ಮರ ಉರುಳಿ ಎರಡು ಮನೆಗಳಿಗೆ ಹಾನಿ

ಭಾರಿ ಗಾತ್ರದ ಮರ ಉರುಳಿ ಎರಡು ಮನೆಗಳಿಗೆ ಹಾನಿ
ಮಂಗಳೂರು ಜೂನ್ 10:ಮಂಗಳೂರಿನಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರೆದಿದೆ. ಮಂಗಳೂರಿನಲ್ಲಿ ಬೃಹತ್ ಮರವೊಂದು ಬಿದ್ದ ಎರಡು ಮನೆಗಳಿಗೆ ಹಾನಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಹಂಪನಕಟ್ಟೆ ಪರಿಸರದಲ್ಲಿ ಮುಂಜಾನೆ ಸುರಿ ಭಾರಿ ಗಾಳಿ ಮಳೆಗೆ ಐತಪ್ಪ ಶೆಟ್ಟಿ ಕಂಪೌಂಡಿನಲ್ಲಿದ್ದಿ ಬಾರಿ ಮರವೊಂದು ಎರಡು ಮನೆಗಳ ಮೇಲೆ ಬಿದ್ದಿದೆ. ಮರ ಬಿದ್ದ ಪರಿಣಾಮಕ್ಕೆ ಎರಡು ಮನೆಗಳಿಗೆ ಹಾನಿಯಾಗಿದ್ದು, ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

ಸ್ಥಳಕ್ಕೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗ್ನಿ ಶಾಮಕದಳ,ಮಂಗಳೂರು ಮಹಾ ನಗರ ಪಾಲಿಕೆ ಅಧಿಕಾರಿ ಮತ್ತು ಅರಣ್ಯಾಧಿಕಾರಿಗಳಿಂದ ಮರ ತೆರವು ಕಾರ್ಯ ನಡೆದಿದೆ.