DAKSHINA KANNADA
ಕೋಡಿಂಬಾಳ ಸಮೀಪ ಮತ್ತೆ ಬೈಕ್ ಮೇಲೆ ಬಿದ್ದ ದೂಪದ ಮರ
ಕಡಬ ಫೆಬ್ರವರಿ 04: ಕೋಡಿಂಬಾಳ ಸಮೀಪ ಮತ್ತೆ ಚಲಿಸುತ್ತಿದ್ದ ಬೈಕ್ ಮೇಲೆ ದೂಪದ ಮರ ಬಿದ್ದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಕೋಡಿಂಬಾಳ ಗ್ರಾಮದ ಪಟ್ನ ನಿವಾಸಿ ಯಶವಂತ ಎಂಬುವವರು ಗಂಭೀರ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಕಡಬ-ಪಂಜ ರಸ್ತೆಯ ಪುಳಿಕುಕ್ಕು ಸಮೀಪ ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭ ರಸ್ತೆ ಪಕ್ಕದಲ್ಲಿದ್ದ ದೂಪದ ಮರ ಬೈಕ್ ಸವಾರನ ಮೇಲೆ ಬಿದ್ದಿದೆ. ಕೂಡಲೇ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಾರ್ವಜನಿಕರು ಈ ಘಟನೆ ನಡೆದಾಗ ಒಟ್ಟು ಸೇರಿದ್ದು, ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಇದೇ ಸ್ಥಳದಲ್ಲಿ ನವೆಂಬರ್ ತಿಂಗಳಲ್ಲಿ ಮರವೊಂದು ಬಿದ್ದು ಸ್ಕೂಟರ್ ಸವಾರರು ಸಾವನಪ್ಪಿದ್ದರು.