LATEST NEWS
ಕಾಲಿನ ಆಣಿ, ನರುಳ್ಳೆ ಮತ್ತು ಚರ್ಮದ ಕೇಡುಗಳಿಗೆ ಚಿಕಿತ್ಸೆ ಮತ್ತು ಪರಿಹಾರ!
ಮಂಗಳೂರು: ‘ಆಣಿ, ನರುಳ್ಳೆ ಮತ್ತು ಚರ್ಮದ ಕೇಡು’, ಚರ್ಮದ ನಿರ್ದಿಷ್ಟ ಪ್ರದೇಶಗಳಲ್ಲಿ ಪುನರಾವರ್ತಿತ ಘರ್ಷಣೆ ಅಥವಾ ಒತ್ತಡದಿಂದಾಗಿ ಕಾಲುಗಳ ಮೇಲೆ ಆಣಿಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಇದು ಕಿರಿಕಿರಿ ಮತ್ತು ನೋವನ್ನು ಉಂಟುಮಾಡುತ್ತದೆ.
ಮುಖ, ಕುತ್ತಿಗೆ, ಕೈ, ಬೆನ್ನು, ಕಾಲುಗಳಲ್ಲಿ ನರುಳ್ಳೆ(wrat) ಕಾಣಿಸಿಕೊಳ್ಳಬಹುದು. ನರುಳ್ಳೆ ಭಯಪಡುವಂಥ ರೋಗವೇನು ಅಲ್ಲ, ಆದರೆ ಇದು ಬಂದರೆ ತ್ವಚೆಯ ಸೌಂದರ್ಯ ಹಾಳಾಗುವುದು.
ಮಂಗಳೂರು ನಗರದ ಜನತೆಗೆ ಕಾಲಿನ ಆಣಿ, ನರುಳ್ಳೆ ಮತ್ತು ಚರ್ಮದ ಕೇಡುಗಳ ಚಿಕಿತ್ಸೆಯಿಂದ ಪರಿಹಾರ ನೀಡುವ ಹಿತ ದೃಷ್ಟಿಯಿಂದ ಈಝೀ ಆಯುರ್ವೇದ ಆಸ್ಪತ್ರೆಯಲ್ಲಿ 1-12-2024 ರ ರವಿವಾರದಂದು ಉಚಿತ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದ ಉದ್ಘಾಟನೆಯನ್ನು ಅಮೇರಿಕಾದ ಚಿಕಾಗೋದಲ್ಲಿರುವ ಆನಂದ ಆಯುರ್ವೇದ ಅಕಾಡೆಮಿಯ ಮುಖ್ಯಸ್ಥರಾದ ಡಾ.ಆಶ್ಲೇಷ ರಾವತ್ ರವರು ನೆರವೇರಿಸಿದರು. ಡಾ. ಆಶ್ಲೇಷ ರಾವತ್ ರವರು ತಮ್ಮ 13 ವಿದ್ಯಾರ್ಥಿಗಳೊಂದಿಗೆ ಆಯುರ್ವೇದ ತರಬೇತಿಗಾಗಿ ಈಝೀ ಆಯುರ್ವೇದ ಆಸ್ಪತ್ರೆಗೆ ಆಗಮಿಸಿರುತ್ತಾರೆ.
ಡಾ. ಆಶ್ಲೇಷ ರಾವತ್ ರವರು ದೀಪ ಪ್ರಜ್ವಲನದ ಮೂಲಕ ಶಿಬಿರಕ್ಕೆ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಆಡಳಿತ ವ್ಯವಸ್ಥಾಪಕರಾದ ಡಾ. ಜನಾರ್ಧನ ವಿ. ಹೆಬ್ಬಾರ್, ಡಾ. ಅಶ್ವಿನ್ ಜಯರಾಮ್ ಶೆಟ್ಟಿ ಮತ್ತು ಡಾ. ರಘುರಾಮ್ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಶಿಬಿರದಲ್ಲಿ ಸುಮಾರು 50ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಡಾ. ಅಶ್ವಿನ್ ಜಯರಾಮ್ ಶೆಟ್ಟಿ ಶಸ್ತ್ರಚಿಕಿತ್ಸೆ ಮಾಡಿದರು. ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬಂದ ಕಾರಣ 20ಕ್ಕೂ ಅಧಿಕ ಮಂದಿಗೆ ನಂತರದ ದಿನಗಳಲ್ಲಿ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಯಿತು.