DAKSHINA KANNADA
ಯಡಕುಮಾರಿ – ಕಡಗರವಳ್ಳಿ ನಿಲ್ದಾಣಗಳ ಮಧ್ಯೆ ಟ್ರ್ಯಾಕ್ ಪುನಃಸ್ಥಾಪನ ಕಾರ್ಯ ಕೊನೇ ಹಂತಕ್ಕೆ..!!
ಹಾಸನ : ಭಾರಿ ಮಳೆಯಿಂದ ಗುಡ್ಡ ಕುಸಿದು ಕೊಚ್ಚಿ ಹೋದ ಯಡಕುಮಾರಿ – ಕಡಗರವಳ್ಳಿ ನಿಲ್ದಾಣಗಳ ಮಧ್ಯೆ ಟ್ರ್ಯಾಕ್ ಪುನಃಸ್ಥಾಪನ ಕಾರ್ಯ ಕೊನೇ ಹಂತದಲ್ಲಿದ್ದು ಭರದಿಂದ ಸಾಗುತ್ತಿದೆ.
ಯಡಕುಮಾರಿ ಮತ್ತು ಕಡಗರವಳ್ಳಿ ನಿಲ್ದಾಣಗಳ ನಡುವಿನ ರೈಲು ಮಾರ್ಗವು ಭಾರೀ ಮಳೆಯಿಂದ ಹಾನಿಗೊಳಗಾಗಿತ್ತು. ದಕ್ಷಿಣ ಪಶ್ಚಿಮ ರೈಲ್ವೆ (SWR) ಈ ಹಾನಿಯನ್ನು ಸರಿಪಡಿಸಲು ಪ್ರತಕೂಲ ಹವಾಮಾನದ ಮಧ್ಯೆ ಕಾರ್ಯಾಚರಣೆ ನಡೆಸುತ್ತಿದೆ. 7 ಭಾರಿ ಯಂತ್ರಗಳೊಂದಿಗೆ ಸುಮಾರು 300 ಕಾರ್ಮಿಕರು ಹಗಲಿರುಳು ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಹಳಿ ಜೋಡಣೆ ಮತ್ತು ಟ್ರ್ಯಾಕ್ ಮರುಸ್ಥಾಪಿಸಲು ಅಗತ್ಯ ಇರುವ ಬಂಡೆಗಳು, ಮರಳು ಚೀಲಗಳು ಇತ್ಯಾದಿ ಅಗತ್ಯವಿರುವ ಎಲ್ಲಾ ಸಾಮಗ್ರಿಗಳನ್ನು ಸ್ಥಳಕ್ಕೆ ತರಿಸಲಾಗಿದೆ.
ಮರಳು ಚೀಲ ತುಂಬುವುದು, ಗೇಬಿಯನ್ ಗೋಡೆ ನಿರ್ಮಾಣ ಮತ್ತು ಟ್ರ್ಯಾಕ್ ಬಲಪಡಿಸುವ ಕೆಲಸಗಳು ಸಮರೋಪದಿಯಲ್ಲಿ ನಡೆಯುತ್ತಿವೆ. ಭಾರೀ ಮಳೆ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ದುರಸ್ತಿ ಕಾರ್ಯಕ್ಕೆ ಅಡ್ಡಿಯಾಗುತ್ತಿದ್ದರೂ ನೈಋತ್ಯ ರೈಲ್ವೇ ವಿಭಾಗ ಈ ದುರಸ್ತಿ ಕಾರ್ಯವನ್ನು ಸಮರ್ಥವಾಗಿ ಮತ್ತು ಸುರಕ್ಷಿತವಾಗಿ ಪೂರ್ಣಗೊಳಿಸಲು ಬದ್ಧವಾಗಿದೆ ಎಂದು ಪುನರುಚ್ಚರಿಸಿದೆ.
https://youtu.be/BHYAgTxjIs4