ಕೊನೆಗೂ ಟಾಕ್ಸಿಕ್ ಚಿತ್ರಕ್ಕೆ ಸಂಬಂಧಿಸಿದಂತೆ ದೊಡ್ಡ ಅಪ್ಡೇಟ್ ಸಿಕ್ಕಿದ್ದು, ಇದೀಗ ಟೀಸರ್ ರೀಲಿಸ್ ಮಾಡುವ ಮೂಲಕ ಮತ್ತೊಮ್ಮೆ ಕೆಜಿಎಫ್ ಲೆವೆಲ್ ನಲ್ಲಿ ಯಶ್ ಸಿನೆಮಾ ಮೂಡಿ ಬರಲಿದೆ. ಇಂದು ರಿಲೀಸ್ ಆಗಿರುವ ಟೀಸರ್ ನಲ್ಲಿ ಯಶ್ ದ್ವಿಪಾತ್ರದಲ್ಲಿ ಅಭಿನಯಿಸಿರುವಂತೆ ತೋರಿಸಲಾಗಿದ್ದು, ಇದು ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಈ ಸಲ ಯುದ್ಧನೇ ಬೇರೆ’ ಎಂಬ ಡೈಲಾಗ್ ಗಮನ ಸೆಳೆದಿದೆ. ‘ಟಾಕ್ಸಿಕ್’ ಟೀಸರ್ ನೋಡಿದವರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ‘ಹಠ ಬಿಡೋ ಮಾತೇ ಇಲ್ಲ’ ಎಂಬುದನ್ನು ಯಶ್ ಸ್ಪಷ್ಟವಾಗಿ ಹೇಳಿದ್ದಾರೆ.
ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳೋದು ಪಕ್ಕಾ ಆಗಿದೆ. ಟೀಸರ್ನಲ್ಲಿ ಯಶ್ ಯಂಗ್ ಲುಕ್ನಲ್ಲಿಯೂ ಕಾಣಿಸಿಕೊಂಡಿದ್ದು, ರಾಯನ (ಯಶ್) ಮಗ ಇರಬಹುದೇ ಎಂಬ ಪ್ರಶ್ನೆ ಮೂಡಿದೆ. ಯಶ್ ಅವರು ಸಖತ್ ವೈಲೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಟೀಸರ್ನಲ್ಲಿ ಸಾಕಷ್ಟು ರಕ್ತ ಕೂಡ ಹರಿದಿದೆ.