Connect with us

FILM

‘ಟಾಕ್ಸಿಕ್’ ಪಯಣ ಶುರು; ಬಿಗ್​ ಅಪ್​ಡೇಟ್ ನೀಡಿದ ಯಶ್

ಬೆಂಗಳೂರು, ಆಗಸ್ಟ್ 08: ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿದ್ದ ಕೆಜಿಎಫ್​ ಸರಣಿ ಬಳಿಕ ನಟ ಯಶ್​ ಮಲಯಾಳಂ ನಿರ್ದೇಶಕಿ ಗೀತು ಮೋಹನ್​ ದಾಸ್​ ನಿರ್ದೇಶನ ಟಾಕ್ಸಿಕ್​​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಈ ಸಿನಿಮಾ ಇಂದು (ಆಗಸ್ಟ್​ 08) ಅಧಿಕೃತವಾಗಿ ಸೆಟ್ಟೇರಿದೆ. ಬೆಂಗಳೂರು ನಗರದ HMT ಫ್ಯಾಕ್ಟರಿಯಲ್ಲಿ ಹಾಕಲಾಗಿರುವ ಬೃಹತ್​ ಸೆಟ್​ನಲ್ಲಿ ಚಿತ್ರತಂಡ ಬ್ರಾಹ್ಮೀ ಮುಹೂರ್ತದಲ್ಲಿ ಪೂಜಾ ಕಾರ್ಯಗಳನ್ನು ನೆರವೇರಿಸಿದ್ದು, ಇಂದಿನಿಂದಲೇ ಶೂಟಿಂಗ್ ಆರಂಭವಾಗಲಿದೆ ಎಂದು ತಿಳಿಸಿದೆ.

ಟಾಕ್ಸಿಕ್​ ಸಿನಿಮಾದ ಕುರಿತು ನಟ ರಾಕಿಂಗ್ ಸ್ಟಾರ್​ ಯಶ್​ ಮಾಹಿತಿ ಹಂಚಿಕೊಂಡಿದ್ದು, ಬೆಳ್ಳಂಬೆಳಿಗ್ಗೆಯೇ ಸಿನಿ ರಸಿಕರಿಗೆ ಬಿಗ್​ ಅಪ್ಡೇಟ್​ ನೀಡಿದ್ದಾರೆ. ಪಯಣ ಶುರುವಾಗಿದೆ (The journey begins #Toxic) ಎಂದು ಬರೆದುಕೊಳ್ಳುವ ಮೂಲಕ ಸಿನಿಮಾದ ಶೂಟಿಂಗ್​ ಇಂದಿನಿಂದಲೇ ಆರಂಭವಾಗುತ್ತದೆ ಎಂದು ತಿಳಿಸಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್​ ಆಗಿದ್ದು, ಮುಂದಿನ ಅಪ್ಡೇಟ್​ಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

https://twitter.com/TheNameIsYash/status/1821377440045998115?ref_src=twsrc%5Etfw%7Ctwcamp%5Etweetembed%7Ctwterm%5E1821377440045998115%7Ctwgr%5Eaa78909b68b42486df6f3c2a1b029fabcf298da6%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fudayavani-epaper-dh93f3fa93d15a477e87db2b32d6c0b8c3%2Ftrainaa8ravaregebengalurumangalururailuilla-newsid-n625311807

ಟಾಕ್ಸಿಕ್​ ಚಿತ್ರದ ಕೆಲಸಗಳು ಅಧಿಕೃತವಾಗಿ ಆರಂಭವಾಗುವುದಕ್ಕೂ ಮುನ್ನ ನಟ ಯಶ್​ ಕುಟುಂಬ ಸಮೇತರಾಗಿ ಧರ್ಮಸ್ಥಳ, ಸುರ್ಯದಲ್ಲಿರುವ ಸದಾಶಿವರುದ್ರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಟಾಕ್ಸಿಕ್​ ಸಿನಿಮಾದ ಶೂಟಿಂಗ್​ ಆರಂಭಗೊಂಡಿದ್ದು, ಬೆಂಗಳೂರಿನ ಹೊರವಲಯದಲ್ಲಿರುವ HMT ಫ್ಯಾಕ್ಟರಿಯಲ್ಲಿ ಇದಕ್ಕಾಗಿ ಬೃಹತ್​ ಸೆಟ್​ ಹಾಕಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *