LATEST NEWS
ಮಹಾಮಳೆ ಮುನ್ಸೂಚನೆ – ಮತ್ತೆ ಜಲಪ್ರಳಯದ ಭೀತಿಯಲ್ಲಿ ಮಂಗಳೂರು ನಗರ
ಮಹಾಮಳೆ ಮುನ್ಸೂಚನೆ – ಮತ್ತೆ ಜಲಪ್ರಳಯದ ಭೀತಿಯಲ್ಲಿ ಮಂಗಳೂರು ನಗರ
ಮಂಗಳೂರು ಜೂನ್ 5: ಮಂಗಳೂರಿನಲ್ಲಿ ಮತ್ತೆ ಜಲಪ್ರಳಯದ ಆತಂಕ ಎದುರಾಗಿದೆ. ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನ ಕೆಲವು ಭಾಗಗಳು ಮತ್ತು ಮಲೆನಾಡಿನ ಕೆಲವು ಭಾಗಗಳಲ್ಲಿ ಜೂನ್ 6 ರಿಂದ 10ರವರೆಗೆ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ನಡುವೆ ಕರಾವಳಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಜೂನ್ 6 ರಿಂದ ಆರಂಭವಾಗುವ ಮಳೆ ಜೂನ್ 10 ರವರೆಗೆ ಸುರಿಯಲಿದ್ದು , ಈ ಮಧ್ಯೆ ಜೂನ್ 7 ರಿಂದ ಮಳೆಯ ಪ್ರಮಾಣ ಏರಿಕೆಯಾಗಲಿದೆ ಎಂದು ಹವಮಾನ ಇಲಾಖೆ ಎಚ್ಚರಿಸಿದೆ. ಈ ಅವಧಿಯಲ್ಲಿ ಅಂದಾಜು 10 ಸೆಂಟಿ ಮೀಟರ್ ಗಿಂತಲೂ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ಹೊರಡಿಸಿದೆ.
ಈ ನಡುವೆ ಸ್ಕೈಮೆಟ್ ವೆಬ್ ಸೈಟ್ ಪ್ರಕಾರ ಜೂನ್ 10 ರಂದು ಕರಾವಳಿ ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಎದುರಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಇದು ಕರಾವಳಿಯ ಅದರಲ್ಲೂ ಮಂಗಳೂರಿಗರಲ್ಲಿ ಭಯ ಸೃಷ್ಟಿಸಿದೆ. ಕಳೆದ ಮೇ 29 ರಂದು ಮಂಗಳೂರಿನಲ್ಲಿ ಸುರಿದ ಮಹಾಮಳೆಗೆ ತತ್ತರಿಸಿದ್ದ ಮಂಗಳೂರು ಇನ್ನೂ ಅದರಿಂದ ಹೊರಬಂದಿಲ್ಲ. ಈ ನಡುವೆ ಮತ್ತೆ ಮಹಾಮಳೆಯಾಗುವ ಮುನ್ಸೂಚನೆ ಜಿಲ್ಲೆಯ ಜನರನ್ನು ಆತಂಕದಲ್ಲಿರುವಂತೆ ಮಾಡಿದೆ.