LATEST NEWS
ಶತಕ ಭಾರಿಸಿ ಮುನ್ನುಗುತ್ತಿರುವ ಟೊಮೆಟೊ ದರ
ಮಂಗಳೂರು ಮೇ 24: ಟೊಮೆಟೊ ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದ್ದು, ಇದೀಗ ಶತಕ ಬಾರಿಸಿ ಮುನ್ನುಗುತ್ತಿದೆ. ಮಳೆ ಮತ್ತೆ ಹೆಚ್ಚಾದರೆ ಟೊಮೆಟೊ ಬೆಲೆ ಮತ್ತೆ ಏರಿಕೆಯಾಗುವು ಸಾಧ್ಯತೆ ಇದೆ.
15 ದಿನಗಳ ಹಿಂದೆ 30 ರಿಂದ 50 ರೂಪಾಯಿ ಕೆಜಿಗೆ ಇದ್ದ ಟೊಮೆಟೊ ಇದೀಗ ಬರೊಬ್ಬರಿ 100 ರೂಪಾಯಿ ದಾಟಿದೆ. ಅಸಾನಿ ಚಂಡ ಮಾರುತದಿಂದಾಗಿ ರಾಜ್ಯದೆಲ್ಲಡೆ ಸುರಿದ ಮಳೆಯಿಂದಾಗಿ ಟೊಮೆಟೊ ಬೆಳೆ ಹಾಳಾಗಿದ್ದು, ಇದರಿಂದಾಗಿ ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಏರಿಕೆಯಲ್ಲೇ ಸಾಗಿದೆ. ನಗರದ ತರಕಾರಿ ಮಾರುಕಟ್ಟೆಯಲ್ಲಿ ಸೋಮವಾರ ಟೊಮೆಟೊ ದರ ಕೆ.ಜಿ.ಗೆ ಬರೋಬ್ಬರಿ ₹ 100 ಇತ್ತು. ಚಿಲ್ಲರೆಯಾಗಿ ಖರೀದಿಸಿದರೆ ಗ್ರಾಹಕರು ಭರ್ತಿ ನೂರರ ಒಂದು ನೋಟು ಕೊಡಬೇಕಿತ್ತು. ಸಗಟು ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 80 ದರ ನಿಗದಿಪಡಿಸಲಾಗಿತ್ತು.
ಕೊಲಾರದಲ್ಲಿ ಟೊಮೆಟೊ ಬೆಲೆ ಏರಿಕೆ ಮುಂದುವರಿದಿದ್ದು, 1 ಕೆ.ಜಿಗೆ ₹ 100ಕ್ಕೆ ಮಾರಾಟವಾಗುತ್ತಿದೆ. ಏ. 23ರಂದು ಸ್ಥಳೀಯ ಮಾರುಕಟ್ಟೆಯಲ್ಲಿ ಟೊಮೆಟೊ ಸಗಟು ಬೆಲೆ ಕ್ವಿಂಟಲ್‌ಗೆ ಕನಿಷ್ಠ ₹ 670 ಮತ್ತು ಗರಿಷ್ಠ ₹ 3,200 ಇತ್ತು. ಸೋಮವಾರ ಟೊಮೆಟೊ ಬೆಲೆ ಕನಿಷ್ಠ ₹ 3,330 ಹಾಗೂ ಗರಿಷ್ಠ ₹ 6 ಸಾವಿರಕ್ಕೆ ಜಿಗಿದಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ.