KARNATAKA
ಗಗನಕ್ಕೇರಿದ ಟೊಮೆಟೊ ಬೆಲೆ ….!!
ಬೆಂಗಳೂರು: ಮಳೆಯಿಂದಾಗಿ ಟೊಮೆಟೋ ಬೆಲೆ ಗಗನಕ್ಕೇರಿದ್ದು. ಇದೀಗ ಒಂದು ಕೆಜಿ ಟೋಮೆಟೋ ಬೆಲೆ 90ರ ಆಸುಪಾಸಿನಲ್ಲಿದೆ.
ರಾಜ್ಯದಲ್ಲಿ ಕೋಲಾರದಲ್ಲಿ ಅತಿ ಹೆಚ್ಚು ಟೊಮೆಟೊ ಬೆಳೆಯಲಾಗುತ್ತದೆ. ಸದ್ಯ ಹೊರ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿರುವುದರಿಂದ ಟೊಮೆಟೊ ಬೆಳೆ ನಾಶವಾಗಿದ್ದು, ಮಾರುಕಟ್ಟೆಗಳಲ್ಲಿ ಟೊಮೆಟೊ ಆವಕ ಕುಸಿದಿದೆ. ಇದರಿಂದ ಟೊಮೆಟೊ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ.
15 ದಿನಗಳ ಹಿಂದೆ ಮೇ 1ರಂದು ಸ್ಥಳೀಯ ಮಾರುಕಟ್ಟೆಯಲ್ಲಿ ಟೊಮೆಟೊ ಸಗಟು ಬೆಲೆ ಕ್ವಿಂಟಾಲ್‌ಗೆ ಕನಿಷ್ಠ ₹ 670 ಮತ್ತು ಗರಿಷ್ಠ ₹ 3,470 ಇತ್ತು. ಭಾನುವಾರ ಟೊಮೆಟೊ ಬೆಲೆ ಕನಿಷ್ಠ ₹ ₹ 2,670 ಹಾಗೂ ಗರಿಷ್ಠ ₹ 5,330ಕ್ಕೆ ಜಿಗಿದಿದೆ. ಸಗಟು ದರಕ್ಕೆ ಅನುಗುಣವಾಗಿ ಚಿಲ್ಲರೆ ಮಾರಾಟ ದರವೂ ಏರಿಕೆಯಾಗಿದೆ.
ಭಾನುವಾರದಂದು ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಪ್ರತಿ ಕಿಲೋ ಟೊಮೆಟೋ ದರವು 75 ರೂ ಆಗಿದ್ದರೂ, ಚಿಲ್ಲರೆ ವ್ಯಾಪಾರದಲ್ಲಿ, ನಾಟಿ ಮತ್ತು ಫಾರ್ಮ್‌ಗಳ ಬೆಲೆಗಳು ಗಾತ್ರವನ್ನು ಅವಲಂಬಿಸಿ 80-90 ರೂಗೆ ಏರಿಕೆ ಮಾಡಲಾಗಿದೆ.