LATEST NEWS
ಹೆಜಮಾಡಿ – ಹೆಚ್ಚುವರಿ ಟೋಲ್ ವಸೂಲಿ ವಿರುದ್ದ ಧರಣಿ
ಉಡುಪಿ ಡಿಸೆಂಬರ್ 2: ಸುರತ್ಕಲ್ ಟೋಲ್ ಗೇಟ್ ನ್ನು ಬಂದ್ ಮಾಡಿ ಅದರ ಹಣವನ್ನು ಹೆಜಮಾಡಿಯಲ್ಲಿ ವಸೂಲಿಗೆ ಹೊರಟ ಕೇಂದ್ರ ಸರಕಾರದ ಆದೇಶದ ವಿರುದ್ದ ಇದೀಗ ಹೆಜಮಾಡಿಯಲ್ಲಿ ವಿರೋಧ ವ್ಯಕ್ತವಾಗಿದ್ದು, ಮತ್ತೊಂದು ಸುತ್ತಿನ ಹೋರಾಟ ಪ್ರಾರಂಭವಾಗಿದೆ.
ಹೆಜಮಾಡಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿಂದು ಬೆಳಗ್ಗೆ ಹೆಜಮಾಡಿ ಟೋಲ್ ಗೇಟ್ ಬಳಿ ಧರಣಿ ನಡೆಸಲಾಯಿತು.
ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ಸುರತ್ಕಲ್ ಮಾತನಾಡಿ, ಟೋಲ್ ವಿಲೀನ ಆದೇಶ ರದ್ದುಗೊಳಿಸದಿದ್ದಲ್ಲಿ ಸುರತ್ಕಲ್ ಟೋಲ್ ಗೇಟ್ ವಿರುದ್ಧದ ಮಾದರಿಯಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಶೇಖರ್ ಹೆಜಮಾಡಿ ಮೊದಲಾದವರು ಧರಣಿಗೆ ನೇತೃತ್ವ ವಹಿಸಿದ್ದರು.