Connect with us

LATEST NEWS

ವಯನಾಡ್ ದುರಂತ ಸಾವಿನ ಸಂಖ್ಯೆ 333ಕ್ಕೆ – ನಿಮ್ಮವರು ಬದುಕಿದ್ದಾರೆ ಎನ್ನುವ ಆಸೆ ಬಿಟ್ಟು ಬಿಡಿ ಎಂದ ಕೇರಳ ಸಿಎಂ

ಕೇರಳ ಅಗಸ್ಟ್ 02: ವಯನಾಡ್ ನಲ್ಲಿ ಭೀಕರ ಭೂಕುಸಿತ ಉಂಟಾಗಿ ನಾಲ್ಕು ದಿನಗಳು ಕಳೆದಿದ್ದೆ. ಈಗಾಗಲೇ ಸಾವನಪ್ಪಿದವರ ಸಂಖ್ಯೆ 333ಕ್ಕೆ ಏರಿಕೆಯಾಗಿದೆ. ಈ ನಡುವೆ ಕೇರಳ ಸಿಎಂ ಇನ್ನು ದುರಂತ ಸ್ಥಳದಲ್ಲಿ ನಾಪತ್ತೆಯಾಗಿರುವವರು ಬದುಕಿರುವ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ.


ವಯನಾಡ್ ನ ಚೂರಲ್‌ಮಲಾ ಮತ್ತು ಮುಂಡಕ್ಕೈನಲ್ಲಿ ಶುಕ್ರವಾರ ಸಂಭವಿಸಿದ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 333 ಕ್ಕೆ ತಲುಪಿದ್ದು, ಸೇನೆ, ಎನ್‌ಡಿಆರ್‌ಎಫ್ ಮತ್ತು ನೌಕಾಪಡೆ ಸಿಬ್ಬಂದಿ ಹೆಚ್ಚಿನ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಇನ್ನೂ 281 ಮಂದಿ ನಾಪತ್ತೆಯಾಗಿರುವುದರಿಂದ ಈ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಗುರುವಾರ ಸಂಜೆ ಅಕಾಲಿಕವಾಗಿ ಸ್ಥಗಿತಗೊಂಡಿದ್ದ ಶೋಧ ಕಾರ್ಯಾಚರಣೆ ಶುಕ್ರವಾರ ಬೆಳಗ್ಗೆ ಪುನರಾರಂಭವಾಯಿತು. ಸೇನೆಯ ಥರ್ಮಲ್ ಸ್ಕ್ಯಾನರ್ ಮುಂಡಕ್ಕೈನಲ್ಲಿ ಅವಶೇಷಗಳ ಅಡಿಯಲ್ಲಿ ಜೀವಂತ ವಸ್ತುವನ್ನು ಪತ್ತೆಹಚ್ಚಿದೆ. ಆದರೆ ಮಣ್ಣು ಮತ್ತು ಮರಗಳನ್ನು ತೆಗೆದರೂ ಯಾವುದೇ ಮನುಷ್ಯ ಅಥವಾ ಪ್ರಾಣಿ ಪತ್ತೆಯಾಗದ ಕಾರಣ ಎನ್‌ಡಿಆರ್‌ಎಫ್ ಸ್ಥಳದಲ್ಲೇ ಹುಡುಕಾಟ ನಿಲ್ಲಿಸಿದೆ. ಈ ನಡುವೆ ಕೇರಳ ಸಿಎಂ ಪಿಣರಾಯಿ ವಿಜಯನ್​ ಅವರು ನಿಮಗೆ ಸಂಬಂಧ ಪಟ್ಟವರ ಕುರಿತು ಎಲ್ಲ ಆಸೆ ಬಿಟ್ಟು ಬಿಡಿ ಎಂದು ಸಂತ್ರಸ್ಥರಿಗೆ ಹೇಳಿದ್ದಾರೆ.

ವಯನಾಡಿನ ಭೂಕುಸಿತಕ್ಕೆ ಸಂಬಂಧ ಪಟ್ಟಂತೆ ಮಾತನಾಡಿದ ಸಿಎಂ ಪಿಣರಾಯಿ ವಿಜಯನ್​ ಅವರು, ಭೂಮಿ ಕುಸಿದು ಮೂರು ದಿನಗಳು ಕಳೆಯುತ್ತಿದ್ದು ಈಗಾಗಲೇ ಸಾವಿನಸಂಖ್ಯೆ 300 ಗಡಿ ದಾಟಿದೆ. ಹೀಗಾಗಿ ಆ ಪ್ರದೇಶಗಳಲ್ಲಿ ಜೀವಂತವಾಗಿರುವವರು ಯಾರು ಸಿಗಲ್ಲ. ಮುಂಡಕ್ಕೈ, ಚೂರಲ್​​ ಮಾಲಾ ಮತ್ತು ಅಟ್ಟಮಾಲ ಪ್ರದೇಶಗಳಲ್ಲಿ ಕಾಪಾಡಬೇಕು ಎಂದರೆ ಬದುಕಿದವರು ಯಾರು ಇಲ್ಲ. ಮುಂಡಕ್ಕೈನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಚೂರಲ್​​ ಮಾಲಾದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 29 ವಿದ್ಯಾರ್ಥಿಗಳು ಕಾಣೆಯಾಗಿದ್ದಾರೆ. ನಿಮ್ಮವರು ಬದುಕಿದ್ದಾರೆ ಎನ್ನುವ ಆಸೆ ಬಿಟ್ಟು ಬಿಡಿ ಎಂದು ಸಿಎಂ ಹೇಳಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *