UDUPI
ಉಡುಪಿಯಲ್ಲಿ ಇಂದು ಜಿರೋ ಕೊರೊನಾ ಪ್ರಕರಣ
ಹಲವು ದಿನಗಳ ಬಳಿಕ ನಿಟ್ಟುಸಿರು ಬಿಟ್ಟ ಉಡುಪಿ ಜಿಲ್ಲಾಡಳಿತ
ಉಡುಪಿ ಜೂನ್ 9: ಹಲವು ದಿನಗಳ ನಂತರ ಮೊದಲ ಬಾರಿಗೆ ಉಡುಪಿಯಲ್ಲಿ ಇಂದು ಯಾವುದೇ ಕೊರೊನಾ ಸೊಂಕು ಪತ್ತೆಯಾಗಿಲ್ಲ. ಇಂದು ಸಂಜೆ ಬಿಡುಗಡೆಯಾದ ರಾಜ್ಯಸರಕಾರದ ಹೆಲ್ತ್ ಬುಲೆಟಿನ್ ನಲ್ಲಿ ಹಲವು ದಿನಗಳ ನಂತರ ಉಡುಪಿಯಲ್ಲಿ ಜಿರೋ ಕೊರೊನಾ ಪ್ರಕರಣ ದಾಖಲಾಗಿದೆ.
ಒಂದು ಸಂದರ್ಭ ಯಾವುದೇ ಕೊರೊನಾ ಪ್ರಕರಣಗಳಿಲ್ಲದೆ ಗ್ರೀನ್ ಝೋನ್ ನಲ್ಲಿದ್ದ ಉಡುಪಿಗೆ ಮಹಾರಾಷ್ಟ್ರದಿಂದ ಆಗಮಿಸಿದ ಕರಾವಳಿಗರಿಂದಾಗಿ , ದಿನದಿಂದ ದಿನಕ್ಕೆ ಕೊರೊನಾ ಸೊಂಕಿನ ಪ್ರಮಾಣ ಏರಿಕೆಯಾಗುತ್ತಲೇ ಹೋಗಿತ್ತು. ಬಹುತೇಕ ಪ್ರತಿದಿನ ಜಿಲ್ಲೆಯಲ್ಲಿ ದಿನಾ ಶತಕಗಳ ಅಂಚಿನಲ್ಲಿ ಕೊರೊನಾ ಪ್ರಕರಣಗಳು ದಾಖಲಾಗುತ್ತಿತ್ತು. ಇದರಿಂದಾಗಿ ಜಿಲ್ಲೆಯ ಹಲವು ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿತ್ತು, ಅಲ್ಲದೆ ಜಿಲ್ಲೆಯ ಆಸ್ಪತ್ರೆಗಳಲ್ಲಿ 400 ಬೆಡ್ ಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೂ ಉಡುಪಿಯಲ್ಲಿ ಈಗಾಗಲೇ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 947ರಲ್ಲಿದೆ. ಇಡಿ ರಾಜ್ಯದಲ್ಲೇ ಕೊರೊನಾ ಸೊಂಕಿತರ ಸಂಖ್ಯೆಯಲ್ಲಿ ಉಡುಪಿ ಜಿಲ್ಲೆ ಈಗಲೂ ಪ್ರಥಮ ಸ್ಥಾನದಲ್ಲಿದೆ.
ಹಲವು ದಿನಗಳ ನಂತರ ಇದೇ ಮೊದಲ ಬಾರಿಗೆ ಉಡುಪಿಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ದಿನಾ ನೂರಾರು ಕೊರೊನಾ ಪ್ರಕರಣಗಳನ್ನು ನೋಡುತ್ತಿದ್ದ ಉಡುಪಿ ಜಿಲ್ಲೆಯ ಜನತೆ ಇಂದು ಸ್ವಲ್ಪಮಟ್ಟಿನ ಉಸಿರು ಬಿಡುವಂತಾಗಿದೆ.