DAKSHINA KANNADA
2024 ಸ್ವಾಗತಿಸಲು ಕಡಲ ನಗರಿ ಮಂಗಳೂರು ಸಜ್ಜು,ಹೊರಾಂಗಣ ಮೋಜು ಮಸ್ತಿಗಳಿಗೆ 10 ಗಂಟೆಗೆ ಬ್ರೇಕ್..!
ಮಂಗಳೂರು: ಹೊಸ ವರ್ಷ 2024 ಸ್ವಾಗತಿಸಲು ಕಡಲ ನಗರಿ ಮಂಗಳೂರು ಸಜ್ಜಾಗಿದ್ದು ತಡ ಪಾರ್ಟಿ, ಮೋಜುಗಳಿಗೆ ಪೊಲೀಸ್ ಇಲಾಖೆ ಬ್ರೇಕ್ ಹಾಕಿದೆ. ನಗರದಲ್ಲಿ ಬೀಚ್, ಪಾರ್ಕ್ ಸಹಿತ ಹೊರಾಂಗಣಗಳಲ್ಲಿ ರಾತ್ರಿ 10 ಗಂಟೆಯವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಪೊಲೀಸ್ ಇಲಾಖೆ ಅವಕಾಶ ನೀಡಿದೆ.
ಹೊಸ ವರ್ಷಾಚರಣೆಗೆ ಹೊಟೇಲ್, ಚರ್ಚ್, ರೆಸಾರ್ಟ್ ಮೊದಲಾದ ಒಳಾಂಗಣಗಳಲ್ಲಿ ರಾತ್ರಿ 12:30 ರವರೆಗೆ ಅವಕಾಶವಿದೆ. ಕಾನೂನು ಮೀರಿದರೆ ಕಠಿಣ ಕ್ರಮದ ಎಚ್ಚರಿಕೆಯನ್ನು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ನೀಡಿದ್ದಾರೆ. ಜೊತೆ ಮುಂಜಾಗೃತಾ ಕ್ರಮವಾಗಿ ವ್ಯಾಪಕ ಬಂದೋಬಸ್ತ್ ನಡೆಸಲಾಗುತ್ತಿದೆ. ನಿಯಮ ಉಲ್ಲಂಘಿಸಿದರೆ ಕ್ರಮ ತೆಗೆದು ಕೊಳ್ಳಲು ಆಯುಕ್ತರು ಸೂಚಿಸಿದ್ದಾರೆ . 850 ಸಿಬ್ಬಂದಿ, ಅಧಿಕಾರಿಗಳು. ಸಿಎಆರ್ ನ ಎಂಟು, ಕೆಎಸ್ಆರ್ ಪಿಯ ಮೂರು ತುಕಡಿ ಭದ್ರತೆಗೆ ನಿಯೋಜಿಸಲಾಗಿದೆ. 106 ಪಾಯಿಂಟ್ ಗಳಲ್ಲಿ ವಿಶೇಷ ನಿಗಾ, 66 ಸೆಕ್ಟರ್ ಮೊಬೈಲ್, 17 ಹೊಯ್ಸಳ ವಾಹನಗಳು ಗಸ್ತು ತಿರುಗಲಿದೆ. ನೈತಿಕ ಪೊಲೀಸ್ ಗಿರಿ, ಡ್ರಗ್ಸ್ ತಡೆಗೆ ಕ್ರಮ ಕೈಗೊಳ್ಳಲಾಗುವುದು. ಬೀಚ್ ಗಳಲ್ಲಿ ಪೊಲೀಸರ ಸಂಪರ್ಕ ಸಂಖ್ಯೆ ಪ್ರದರ್ಶಿಸಲಾಗುವುದು. ರವಿವಾರ ಸಂಜೆಯಿಂದಲೇ ವಿಶೇಷ ನಿಗಾ ಇಡಲಾಗುವುದು. ಮದ್ಯ ಸೇವಿಸಿ ವಾಹನ ಚಾಲನೆ, ಅಸಭ್ಯ ವರ್ತನೆ ಮೇಲೂ ನಿಗಾ ಇಡಲಾಗುವುದು. ಈಗಾಗಲೇ ಒಳಾಂಗಣದಲ್ಲಿ ಆಚರಣೆಗೆ 36 ಮಂದಿ ಪರವಾನಿಗೆ ಪಡೆದುಕೊಂಡಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.