LATEST NEWS
ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆ ವಿವಾದ ವೇದಿಕೆಯಲ್ಲೇ ಟಿಪ್ಪುಗೆ ಧಿಕ್ಕಾರ ಕೂಗುತ್ತೆನೆ- ಕೇಂದ್ರ ಸಚಿವ ಹೆಗ್ಡೆ
ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆ ವಿವಾದ ವೇದಿಕೆಯಲ್ಲೇ ಟಿಪ್ಪುಗೆ ಧಿಕ್ಕಾರ ಕೂಗುತ್ತೆನೆ- ಕೇಂದ್ರ ಸಚಿವ ಹೆಗ್ಡೆ
ಬೆಂಗಳೂರು ಅಕ್ಟೋಬರ್ 21: ರಾಜ್ಯ ಸರಕಾರ ಈ ವರ್ಷವೂ ಟಿಪ್ಪು ಜಯಂತಿಯನ್ನು ನಡೆಸಲು ಹೊರಟ್ಟಿದ್ದು, ಈಗಾಗಲೇ ಇದು ದೊಡ್ಡ ವಿವಾದವನ್ನೆ ಹುಟ್ಟುಹಾಕಿದೆ. ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಆಮಂತ್ರಣ ಪತ್ರಿಕೆಯಲ್ಲಿ ತನ್ನ ಹೆಸರು ನಮೂದಿಸಲು ವಿರೋಧ ವ್ಯಕ್ತಪಡಿಸಿ , ರಾಜ್ಯ ಸರಕಾರ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಷ್ಟಾಚಾರದ ಪ್ರಕಾರ ಹೆಸರು ನಮೂದಿಸಲಾಗುವುದು ಎಂದು ಹೇಳಿಕೆ ನೀಡಿದ್ದರು.
ನನ್ನ ವಿರೋಧದ ನಡುವೆಯೂ ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರನ್ನು ಮುದ್ರಿಸಿದರೆ ಸಿಎಂ ಸಿದ್ದರಾಮಯ್ಯ ಅವರು ಇರುವ ವೇದಿಕೆಯಲ್ಲಿ ಟಿಪ್ಪು ಇತಿಹಾಸವನ್ನು ಬಿಚ್ಚಿಡುತ್ತೇನೆ, ಅಷ್ಟೆ ಅಲ್ಲದೇ ಧಿಕ್ಕಾರ ಕೂಗುತ್ತೇನೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.
ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಸೇರಿಸುವುದು ಬೇಡ ಎಂದು ಸ್ವತಃ ನಾನೇ ಹೇಳಿರುವುದರಿಂದ ಸರ್ಕಾರಕ್ಕೆ ನನ್ನ ಹೆಸರು ಸೇರಿಸದಿರಲು ಅವಕಾಶವಿದೆ ಎಂದು ಅವರು ಹೇಳಿದರು. ಆದರೆ ರಾಜ್ಯ ಸರ್ಕಾರ ಹಠಮಾರಿತನದಿಂದ ನನ್ನ ಹೆಸರನ್ನು ಮುದ್ರಿಸಿದ್ದೇ ಆದಲ್ಲಿ ಆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಭಾಷಣದಲ್ಲಿ ಟಿಪ್ಪು ಇತಿಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು, ಧಿಕ್ಕಾರ ಕೂಗುತ್ತೇನೆ, ತಾಕತ್ ಇದ್ದರೆ ಸಿದ್ದರಾಮಯ್ಯನವರು ನನ್ನನ್ನು ತಡೆಯಲಿ ಎಂದು ಹೆಗ್ಡೆ ಸವಾಲು ಹಾಕಿದ್ದಾರೆ.
ರಾಜ್ಯ ಸರಕಾರದ ಟಿಪ್ಪು ಜಯಂತಿ ಆಚರಣೆಗೆ ಹಿಂದೂ ಪರ ಸಂಘಟನೆಗಳು ಸೇರಿದಂತೆ ಬಿಜೆಪಿ ವಿರೋಧ ಮುಂದುವರೆದಿದೆ. ಈ ನಡುವೆ ಈ ವರ್ಷ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಆಮಂತ್ರಣ ವಿವಾದ, ರಾಜ್ಯ ಸರಕಾರ ಹಾಗೂ ಕೇಂದ್ರ ಸಚಿವರ ಸವಾಲ್ ಗಳ ನಡುವೆ ಟಿಪ್ಪು ಜಯಂತಿ ಆಚರಣೆ ಬಗ್ಗೆ ಕುತೂಹಲ ಮೂಡಿಸಿದೆ.