BANTWAL
ತ್ರಿಶೂಲ ಪೀಠದ ಮೇಲೆ ಟಿಕ್‍ಟಾಕ್ ವಿಡಿಯೋ
– ನಾಲ್ವರು ಆರೋಪಿಗಳ ಬಂಧನ
ಬಂಟ್ವಾಳ ಜೂನ್ 14: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಂಚಿನಡ್ಕ ಪದವಿನ ಹಿಂದು ರುದ್ರಭೂಮಿಯಲ್ಲಿ ಘಟನೆ ನಡೆದಿದ್ದು ಆರೋಪಿಗಳು ಟಿಕ್ ಟಾಕ್ ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಈ ಬಗ್ಗೆ ಹಿಂದು ಸಂಘಟನೆಗಳ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಗಿದ್ದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಆರೋಪಿಗಳಾದ ಸಜಿಪ ಮೂಡ ಗ್ರಾಮದ ಮಸೂದ್, ಅಜೀಮ್, ಅಬ್ದುಲ್ ಲತೀಫ್, ಅರ್ಫಾಜ್ ಎಂಬವರನ್ನು ಬಂಧಿಸಿದ್ದಾರೆ.
ಶಿವನ ಢಮರುಗ ಮತ್ತು ತ್ರಿಶೂಲ ಇರುವ ಧ್ವಜ ಪೀಠದಲ್ಲಿ ಶೂ ಧರಿಸಿ ಕುಣಿದಿದ್ದಲ್ಲದೆ ವ್ಯಂಗ್ಯವಾಗಿ ಚಿತ್ರಿಸಿ ವಿಡಿಯೋ ಮಾಡಿದ್ದರು. ಆರೋಪಿಗಳು ಹಿಂದುಗಳ ಪವಿತ್ರ ಜಾಗದಲ್ಲಿ ಇಂಥ ವಿಡಿಯೋ ಮಾಡಿದ್ದು ಹಿಂದುಗಳ ಭಾವನೆಯನ್ನು ಘಾಸಿಗೊಳಿಸಿದ್ದಾಗಿ ರುದ್ರಭೂಮಿಯ ಅಧ್ಯಕ್ಷರು ದೂರು ದಾಖಲಿಸಿದ್ದರು. ಪೊಲೀಸರು ಈಗ ಕೃತ್ಯದಲ್ಲಿ ಭಾಗಿಯಾದವರನ್ನು ಹೆಡೆಮುರಿ ಕಟ್ಟಿದ್ದಾರೆ.