National
ಭಾರತದ ಬಳಿಕ ಇದೀಗ ಅಮೇರಿಕಾದಲ್ಲೂ ಟಿಕ್-ಟಾಕ್ ನಿಷೇಧಕ್ಕೆ ಹೆಚ್ಚಿದ ಒತ್ತಡ….

ವಾಷಿಂಗ್ಟನ್ ಡಿ.ಸಿ, ಜುಲೈ 16: ಭಾರತದ ಬಳಿಕ ಇದೀಗ ಚೀನಾ ವಿರುದ್ಧ ಇತರ ದೇಶಗಳಲ್ಲೂ ಅಸಮಾಧಾನ ಭುಗಿದೇಳಲಾರಂಭಿಸಿದೆ. ಭಾರತ-ಚೀನಾ ಗಡಿಭಾಗದಲ್ಲಿ ಚೀನಾ ನಿರಂತರವಾಗಿ ಭಾರತದ ಭೂಮಿಯನ್ನು ಅತಿಕ್ರಮಿಸಲು ನಡೆಸುತ್ತಿರುವ ಪ್ರಯತ್ನ ಹಾಗೂ ಇತ್ತೀಚೆಗೆ ಲಡಾಕ್ ನ ಗಲ್ವಾನ್ ವ್ಯಾಲಿಯಲ್ಲಿ ನಡೆದ ಘರ್ಷಣೆಯ ಬಳಿಕ ಚೀನಾ ವಿರುದ್ಧ ಭಾರತ ಡಿಜಿಟಲ್ ವಾರ್ ಗೆ ಮುಂದಾಗಿತ್ತು. ಈ ಸಂಬಂಧ ಚೀನಾ ದೇಶದ ಸುಮಾರು 59 ಪ್ರಮುಖ ಮೊಬೈಲ್ ಆ್ಯಪ್ ಗಳನ್ನು ಭಾರತದಲ್ಲಿ ನಿಶೇಧಿಸಿದೆ.
ಇವುಗಳಲ್ಲಿ ಅತೀ ಬೇಡಿಕೆಯುಳ್ಳ ಟಿಕ್-ಟಾಕ್ ಕೂಡಾ ಸೇರಿದ್ದು, ಈ ಆ್ಯಪ್ ಗಳು ದೇಶದ ಭದ್ರತೆ ಅಪಾಯಕಾರಿ ಎನ್ನುವ ಕಾರಣವನ್ನೂ ನೀಡಿದೆ. ಭಾರತದ ಬಳಿಕ ಇದೀಗ ಅಮೇರಿಕಾದಲ್ಲೂ ಟಿಕ್-ಟಾಕ್ ನಿಶೇಧಕ್ಕೆ ಒತ್ತಾಯಗಳು ಕೇಳಿ ಬರಲಾರಂಭಿಸಿದೆ. ಅಮೇರಿಕಾ ಕಾಂಗ್ರೇಸ್ ನ 25 ಸದಸ್ಯರು ದೇಶದಲ್ಲಿ ಟಿಕ್-ಟಾಕ್ ನಿಶೇಧಿಸುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಮನವಿ ಮಾಡಿದ್ದಾರೆ.

ಅಮೇರಿಕಾ ನಾಗರಿಕರ ಗೌಪ್ಯತಾ ಮಾಹಿತಿಗಳನ್ನು ಟಿಕ್-ಟಾಕ್ ನಂತಹ ಚೀನಾ ಆಪ್ ಗಳು ದುರ್ಬಳಕೆ ಮಾಡುವ ಸಾಧ್ಯತೆ ಹೆಚ್ಚಿರುವ ಕಾರಣಕ್ಕೆ ಹಾಗೂ ಚೀನಾದ ಯಾವುದೇ ಆ್ಯಪ್ ಗಳು ನಂಬಿಕೆಗೆ ಅರ್ಹವಲ್ಲದಿರುವ ಕಾರಣ ಚೀನಾ ಆ್ಯಪ್ ಗಳನ್ನು ಅಮೇರಿಕಾದಲ್ಲಿ ನಿಶೇಧಿಸಬೇಕು ಎನ್ನುವ ಅಂಶಗಳು ಮನವಿ ಪತ್ರದಲ್ಲಿದೆ.
ಟಿಕ್-ಟಾಕ್ ನಂತಹ ಆ್ಯಪ್ ಗಳು ತನ್ನ ಮಾಹಿತಿಗಳನ್ನು ನೇರವಾಗಿ ಚೀನಾ ಸರಕಾರಕ್ಕೆ ತಲುಪಿಸುತ್ತಿದ್ದು, ಇದು ದೇಶದ ಭದ್ರತೆಗೂ ಮಾರಕ. ಭಾರತ ಟಿಕ್-ಟಾಕ್ ಸೇರಿದಂತೆ ಚೀನಾದ 59 ಆ್ಯಪ್ ಗಳನ್ನು ನಿಶೇಧಿಸಿದೆ ಸೂಕ್ತ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಹಿನ್ನಲೆಯಲ್ಲಿ ಅಮೇರಿಕಾ ಕೂಡಾ ಟಿಕ್-ಟಾಕ್ ಆ್ಯಪನ್ನು ದೇಶದಲ್ಲಿ ನಿಶೇಧಿಸಬೇಕು ಎಂದು ಅಮೇರಿಕಾದ ಕಾಂಗ್ರೇಸ್ ನ 25 ಪುರುಷ ಮತ್ತು ಮಹಿಳಾ ಸದಸ್ಯರು ಒತ್ತಾಯಿಸಿದ್ದಾರೆ.