LATEST NEWS
29 ಮರಿಗಳಿಗೆ ಜನ್ಮ ನೀಡಿದ್ದ ಸೂಪರ್ ಮಾಮ್ ಖ್ಯಾತಿಯ ಹುಲಿ ಸಾವು…!!
ಮಧ್ಯಪ್ರದೇಶ: ತನ್ನ ಜೀವಿತಾವಧಿಯಲ್ಲಿ 29 ಮರಿಗಳಿಗೆ ಜನ್ಮ ನೀಡಿದ್ದ ಸೂಪರ್ ಮಾಮ್ ಖ್ಯಾತಿಯ ಹುಲಿ ವಯೋಸಹಜ ಕಾಯಿಲೆಯಿಂದ ಸಾವನಪ್ಪಿದ್ದು, ನಿಯಮಗಳವುಸಾರವಾಗಿ ಅಂತ್ಯಕ್ರಿಯೆ ನಡೆಸಲಾಗಿದೆ.
ಮಧ್ಯಪ್ರದೇಶದ ಪೆಂಚ್ ನ್ಯಾಷನಲ್ ಪಾರ್ಕ್‌ನಲ್ಲಿರುವ ಈ ಹುಲಿಗೆ ಕಾಲರ್‌ವಾಲಿ ಎಂಬ ಹೆಸರು ಇಡಲಾಗಿದ್ದು, 2008 ರಿಂದ 2018 ರ ಅವಧಿಯಲ್ಲಿ ಒಟ್ಟು 29 ಮರಿಗಳಿಗೆ ಜನ್ಮ ನೀಡಿ ‘ಸೂಪರ್ ಮಾಮ್’ ಎಂದು ಬಿರುದು ಪಡೆದಿತ್ತು.
2008 ನವೆಂಬರ್‌ನಲ್ಲಿ ಕಾಲರ್‌ವಾಲಿ ಮೊದಲು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಕಳೆದ ಒಂದು ವಾರದಿಂದ ಅದರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಪಾರ್ಕ್ ಸಿಬ್ಬಂದಿ ಚಿಕಿತ್ಸೆ ನೀಡಿದ್ದರು. ಆದರೆ, ವಯೋಸಹಜವಾಗಿ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೂಪರ್ ಮಾಮ್ ನಿಧನಕ್ಕೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸಂತಾಪ ಸೂಚಿಸಿದ್ದು, ‘ಕಾಲರ್‌ವಾಲಿ ಸೂಪರ್ ಮಾಮ್ ಮಧ್ಯಪ್ರದೇಶದ ಹೆಮ್ಮೆಯಾಗಿತ್ತು’ ಎಂದು ಸ್ಮರಿಸಿದ್ದಾರೆ. ಮಧ್ಯಪ್ರದೇಶದಲ್ಲೂ ಹೆಚ್ಚಾಗಿ ಹುಲಿಗಳು ಕಂಡು ಬರುತ್ತಿದ್ದು, ಅಲ್ಲಿನ ಅರಣ್ಯ ಇಲಾಖೆ ಮಾಹಿತಿ ಪ್ರಕಾರ 526 ಹುಲಿಗಳಿವೆ.