ಉತ್ತರಕನ್ನಡ ಸೆಪ್ಟೆಂಬರ್ 14: ವಾಹನ ಸವಾರರ ಎದುರು ಹಾಡುಹಗಲೇ ಹುಲಿರಾಯ ಪ್ರತ್ಯಕ್ಯವಾದ ಘಟನೆ ಕೈಗಾ-ಯಲ್ಲಾಪುರ ರಸ್ತೆಯಲ್ಲಿ ನಡೆದಿದೆ. ಕಳೆದ ಹಲವು ತಿಂಗಳಲ್ಲಿ ಆಗಾಗ ಕಾಣಿಸಿಕೊಳ್ಳುತಿದ್ದ ಹುಲಿಯು ಇದೀಗ ಮತ್ತೆ ವಾಹನ ಸವಾರರಿಗೆ ಕಾಣಿಸಿಕೊಳ್ಳುತ್ತಿದೆ.


ಕಾರವಾರದ ಕೈಗಾ-ಯಲ್ಲಾಪುರ ರಸ್ತೆಯ ಬಾರೆ ಘಟ್ಟದ ಪ್ರದೇಶದಲ್ಲಿ ಹುಲಿ ಓಡಾಡಿದ ದೃಶ್ಯ ವೈರಲ್ ಆಗಿದೆ. ಸೆಪ್ಟೆಂಬರ್ 12ರಂದು ವಾಹನ ಚಾಲಕರ ಕಣ್ಣಿಗೆ ಹುಲಿ ಕಾಣಿಸಿಕೊಂಡಿಗೆ.  ಈ ವೇಳೆ ರಸ್ತೆಗೆ ಬಂದ ಹುಲಿ ಸುಮಾರು 20 ನಿಮಿಷಗಳ ಕಾಲ ರಸ್ತೆಯಲ್ಲೇ ಘನ ಗಂಭೀರ ಹೆಜ್ಜೆಯನ್ನಿಟ್ಟು ಓಡಾಡಿದ್ದು ,ಈ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಕೈಗಾ ಸುತ್ತಮುತ್ತ ಹುಲಿ ಓಡಾಟ ಸಾಮಾನ್ಯ, ಹಗಲಿನ ಸಮಯದಲ್ಲೆ ಹುಲಿ ಪ್ರತ್ಯಕ್ಷವಾದ ಕಾರಣ ಗ್ರಾಮಸ್ಥರಲ್ಲಿ ಭೀತಿಯುಂಟಾಗಿದೆ.

 

Share Information