LATEST NEWS
ಉತ್ತರ ಪ್ರದೇಶ – ಗ್ರಾಮಕ್ಕೆ ನುಗ್ಗಿ ಕಂಪೌಂಡ್ ಗೊಡೆ ಮೇಲೆ ಕುಳಿತು ವಿಶ್ರಾಂತಿ ಪಡೆದ ಹುಲಿ – ವಿಡಿಯೋ ವೈರಲ್

ಉತ್ತರ ಪ್ರದೇಶ ಡಿಸೆಂಬರ್ 26: ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿರುವ ಹುಲಿ ಸಂರಕ್ಷಿತ ಅರಣ್ಯದಿಂದ ತಪ್ಪಿಸಿಕೊಂಡ ಹುಲಿಯೊಂದು ಗ್ರಾಮವೊಂದಕ್ಕೆ ನುಗ್ಗಿ ಮನೆಯ ಕಂಪೌಂಡ್ ಗೊಡೆ ಮೇಲೆ ವಿಶ್ರಾಂತಿ ಪಡೆಯುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಪಿಲಿಭಿತ್ ಜಿಲ್ಲೆಯ ಹುಲಿ ಸಂರಕ್ಷಿತ ಅರಣ್ಯದಿಂದ ಹೊರಬಂದು ರಾತ್ರಿ ಅಟ್ಕೋನಾ ಗ್ರಾಮವನ್ನು ತಲುಪಿದ ಹುಲಿ ಇನ್ನೂ ಗುರುದ್ವಾರದ ಗೋಡೆಯ ಮೇಲೆ ವಿಶ್ರಾಂತಿ ಪಡೆಯುತ್ತಿದೆ. ಹುಲಿಯನ್ನು ನೋಡಲು ಅಪಾರ ಜನಸ್ತೋಮವೇ ನೆರೆದಿತ್ತು. ಅರಣ್ಯ ಇಲಾಖೆಯಿಂದ ನೆಟ್ ಬಳಸಿ ಭದ್ರತಾ ಕವಚ ರಚಿಸಲಾಗಿದೆ. ಪೊಲೀಸ್ ಆಡಳಿತ ಅಧಿಕಾರಿಗಳು ಕೂಡ ಸ್ಥಳಕ್ಕೆ ತಲುಪಿದ್ದಾರೆ. ಹುಲಿಯಿಂದ ಕೆಲವೇ ಮೀಟರ್ ದೂರದಲ್ಲಿ ಸ್ಥಳೀಯರು ಜಮಾಯಿಸಿರುವುದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದೆ.
