LATEST NEWS
ಉಡುಪಿ – ಹೃದಯಾಘಾತಕ್ಕೆ ಯುವ ಹುಲಿವೇಷಧಾರಿ ಅನಿಲ್ ಕುಮಾರ್ ನಿಧನ

ಉಡುಪಿ ಎಪ್ರಿಲ್ 28:ಯುವಜನತೆ ಹೃದಯಾಘಾತದಿಂದ ಸಾವನಪ್ಪುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಉಡುಪಿ ಖ್ಯಾತ ಹುಲಿವೇಷಧಾರಿ ಯುವಕ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರನ್ನು ಉಡುಪಿಯ ಅಜ್ಜರಕಾಡು ನಿವಾಸಿ ಅನಿಲ್ ಕುಮಾರ್ (31) ಎಂದು ಗುರುತಿಸಲಾಗಿದೆ. ಕಾಡಬೆಟ್ಟು ಅಶೋಕ್ ರಾಜ್ ಅವರ ತಂಡದ ಹುಲಿ ಕುಣಿತದಲ್ಲಿ ಅನಿಲ್ ಕುಮಾರ್ ಅವರು ಹುಲಿವೇಷಧಾರಿಯಾಗಿ ಕಾಣಿಸಿಕೊಂಡಿದ್ದರು. ತಮ್ಮ ಹುಲಿ ಕುಣಿತಕ್ಕೆ ಅವರದ್ದೇ ಆದ ಅಭಿಮಾನಿಗಳನ್ನು ಕೂಡಾ ಸಂಪಾದಿಸಿದ್ದರು. ಇದರ ಜೊತೆಗೆ ವೃತ್ತಿಯಾಗಿ ಇವರು ಪೈಂಟಿಂಗ್ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದರು. ಅಪಾರ ಬಂಧು-ಬಳಗ, ಸ್ನೇಹಿತರನ್ನು ಇವರು ಅಗಲಿದ್ದಾರೆ.
