LATEST NEWS
ಹೆಬ್ರಿ – ಶಿವಪುರ ಹೊಳೆಯಲ್ಲಿ ಈಜಲು ಹೋಗಿ ಮೂವರು ವಿಧ್ಯಾರ್ಥಿಗಳು ನೀರುಪಾಲು

ಹೆಬ್ರಿ: ಶಿವಪುರ ಗ್ರಾಮದ ಬಟ್ರಾಡಿ ಬಳಿಯ ಶಿವಪುರ ಹೊಳೆಗೆ ಶುಕ್ರವಾರ ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ನಡೆದಿದೆ. ಮೃತರನ್ನು ಮೃತರನ್ನು ಸುದರ್ಶನ್ (16), ಸೋನಿತ್ (17) ಹಾಗೂ ಕಿರಣ್ (16) ಎಂದು ಗುರುತಿಸಲಾಗಿದೆ. ಸ್ಥಳೀಯರ ಸಹಕಾರದಿಂದ ಮೃತದೇಹವನ್ನು ಮೇಲೆ ಎತ್ತಲಾಗಿದೆ.
ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಳ್ಳು ಗುಡ್ಡೆ ಸಮೀಪದ ಭಟ್ರಾಡಿಯ ಹೊಳೆಯಲ್ಲಿ ಈಜಲು ಹೋದ ಹಿರಿಯಡ್ಕ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಹೆಬ್ರಿ ತಹಸೀಲ್ದಾರ್ ಪುರಂದರ, ಕಂದಾಯ ನಿರೀಕ್ಷಕ ಹಿತೇಶ್, ಪಿಎಸ್ಐ ಮಹೇಶ್, ಮುಖಂಡರಾದ ಸುರೇಶ್ ಶೆಟ್ಟಿ ಶಿವಪುರ, ರಮೇಶ್ ಪೂಜಾರಿ ಪರಿಶೀಲನೆ ನಡೆಸಿದರು.