LATEST NEWS
ಇಫ್ತಾರ್ ಕೂಟ ಪೇಜಾವರ ಶ್ರೀಗಳ ಯೂಟರ್ನ್
ಇಫ್ತಾರ್ ಕೂಟ ಪೇಜಾವರ ಶ್ರೀಗಳ ಯೂಟರ್ನ್
ಉಡುಪಿ ಜೂನ್ 12: ಪೇಜಾವರ ಶ್ರೀಗಳು ಜೂನ್ 13 ರಂದು ಆಯೋಜಿಸಿದ್ದ ಇಫ್ತಾರ್ ಕೂಟ ರದ್ದಾಗಿದ್ದು, ಇದು ಮುಸ್ಲಿಂ ಭಾಂದವರ ಆಕ್ರೋಶಕ್ಕೆ ಕಾರಣವಾಗಿದೆ. ಮುಸ್ಲಿಮರಿಗೆ ಆಸಕ್ತಿ ಇಲ್ಲದ ಕಾರಣಕ್ಕೆ ಇಫ್ತಾರ್ ಕೂಟ ರದ್ದಾಗಿದೆ ಎಂದು ಹೇಳಿಕೆ ನೀಡಿದ್ದ ಪೇಜಾವರ ಶ್ರೀಗಳ ವಿರುದ್ದ ಮುಸ್ಲಿಂ ಬಾಂಧವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿ ದೇಶದ ಗಮನ ಸೆಳೆದಿದ್ದ ಪೇಜಾವರ ಶ್ರೀಗಳ ಇಫ್ತಾರ್ ಕೂಟ ಈ ಭಾರಿ ರದ್ದಾಗಿ ವಿವಾದಕ್ಕೀಡಾಗಿದೆ. ಇತ್ತೀಚೆಗೆ ತುಮಕೂರಿನಲ್ಲಿ ಮಾತನಾಡಿದ ಪೇಜಾವರ ಶ್ರೀ ಮುಸ್ಲಿಮರಿಗೆ ಆಸಕ್ತಿ ಇಲ್ಲದ ಕಾರಣ ಇಫ್ತಾರ್ ಕೂಟ ರದ್ದು ಮಾಡಿದ್ದೇನೆ ಎಂದು ಹೇಳಿಕೆ ನೀಡಿದ್ದರು.
ಆದರೆ ಮುಸ್ಲಿಂ ಮುಖಂಡರ ಜೊತೆ ಮಾತನಾಡಿ ಇಫ್ತಾರ್ ಕೂಟಕ್ಕೆ ದಿನ ನಿಗದಿ ಮಾಡಿದ್ದ ಪೇಜಾವರ ಶ್ರೀ ಒಮ್ಮೆಲೇ ತನ್ನ ವರಸೆ ಬದಲಿಸಿದ್ದು, ಇದಕ್ಕೆ ಕಾರಣ ಹಿಂದೂ ಸಂಘಟನೆಗಳ ಒತ್ತಡವೇ ಕಾರಣ ಎಂದು ಸಾರ್ವಜನಿಕರಲ್ಲಿ ಸಂಶಯ ಮೂಡಿದೆ. ಆದರೆ ಇದನ್ನು ಶಾಸಕ ರಘುಪತಿ ಭಟ್ ಅಲ್ಲಗಳೆದಿದ್ದಾರೆ ಇದು ಪೇಜಾವರ ಶ್ರೀಗಳ ನಿರ್ಧಾರ ಇದರಲ್ಲಿ ಹಿಂದೂ ಸಂಘಟನೆಗಳ ಪಾತ್ರ ಇಲ್ಲ ಎಂದು ಹೇಳಿದ್ದಾರೆ.
ಕಳೆದ ಬಾರಿ ತನ್ನ ಪರ್ಯಾಯ ಅವಧಿಯಲ್ಲಿ ಮಠದಲ್ಲೇ ಇಫ್ತಾರ್ ಕೂಟವನ್ನು ಪೇಜಾವರ ಶ್ರೀಗಳು ನಡೆಸಿದ್ದರು. ಕಳೆದ ಬಾರಿ ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು.
ಈ ಬಾರಿಯೂ ಇಫ್ತಾರ್ ಕೂಟ ನಡೆಸುವುದಾಗಿ ದಿನ ಘೋಷಿಸಿ ಕೇವಲ ಕೆಲವೇ ದಿನಗಳಲ್ಲಿ ತಮ್ಮ ಮಾತು ಬದಲಿಸಿರುವುದು ಅಲ್ಲದೇ ಮುಸ್ಲಿಮರಿಗೆ ಆಸಕ್ತಿ ಇಲ್ಲ ಎಂದು ತನ್ನ ಭಾರವನ್ನು ಮುಸ್ಲಿಂ ರ ಮೇಲೆ ಹೊರಿಸಿದ್ದೇಕೆ ಇತ್ಯಾದಿ ಪ್ರಶ್ನೆಗಳು ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ಮುಸ್ಲಿಂ ಮುಖಂಡರು ಪೇಜಾವರ ಶ್ರೀ ಈ ರೀತಿ ಹೇಳಿಕೆ ನೀಡಲು ಹಿಂದೂ ಸಂಘಟನೆಗಳ ಒತ್ತಡವೇ ಕಾರಣ ಎಂದು ಹೇಳಿದ್ದಾರೆ