LATEST NEWS
ದೆಹಲಿ – ತೀವ್ರಗೊಂಡ ಕುಸ್ತಿಪಟುಗಳ ಪ್ರತಿಭಟನೆ…!!

ದೆಹಲಿ ಮೇ 28: ಬಿಜೆಪಿ ಸಂಸದ ಡಬ್ಲ್ಯೂಎಫ್ಐ ಅಧ್ಯಕ್ಷ ಬ್ರಿಜ್ ಭೂಷಣ್ ಅವರ ಮೇಲೆ ಇರುವ ಲೈಂಗಿಕ ಕಿರುಕುಳ ಆರೋಪದಲ್ಲಿ ಅವರನ್ನು ಬಂಧಿಸಬೇಕೆಂದು ದೇಶದ ಖ್ಯಾತ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆ ಇಂದು ತೀವ್ರ ಸ್ವರೂಪ ಪಡೆದಿದ್ದು, ನೂತನ ಸಂಸತ್ ಮುತ್ತಿಗೆ ಹಾಕಲು ಹೋರಾಟ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ವೇಳೆ ಪೊಲೀಸರು, ಕುಸ್ತಿಪಟುಗಳ ಮೇಲೆ ಮ್ಯಾನ್ ಹ್ಯಾಂಡ್ಲಿಂಗ್ ಮಾಡಿ, ಅಮಾನುಷವಾಗಿ ನಡೆದುಕೊಂಡಿದ್ದಾರೆ. ಸದ್ಯ ಪೊಲೀಸರ ಈ ವರ್ತನೆ ಭಾರೀ ಚರ್ಚೆಗೆ ಕಾರಣವಾಗಿದೆ.

ಡಬ್ಲ್ಯೂಎಫ್ಐ ಅಧ್ಯಕ್ಷ ಬ್ರಿಜ್ ಭೂಷಣ್ ಅವರನ್ನು ಬಂಧಿಸಬೇಕು. ತಮಗೆ ಆಗಿರುವ ಕಿರುಕುಳ ಮತ್ತ ಲೈಂಗಿಕ ದೌರ್ಜನ್ಯದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಕುಸ್ತಿಪಟುಗಳು ದೆಹಲಿಯಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ನೂತನ ಸಂಸತ್ ಭವನದ ಉದ್ಘಾಟನೆ ನಡೆಯಿತು. ಉದ್ಘಾಟನೆ ವೇಳೆ ನೂತನ ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಕುಸ್ತಿಪಟುಗಳು ಪಾದಯಾತ್ರೆ ನಡೆಸುತ್ತಿದ್ದರು.
ಆಗ ಪೊಲೀಸರು ಇವರನ್ನು ತಡೆಯಲು ಮುಂದಾಗಿದ್ದಾರೆ. ನೂಕಾಟ, ತಳ್ಳಾಟ ನಡೆದಿದೆ. ಕೊನೆಗೆ ಕುಸ್ತಿಪಟುಗಳಾದ ವಿನೇಶ್ ಪೊಗಾಟ್, ಸಾಕ್ಷಿ ಮಲಿಕ್, ಬಜ್ರಂಗ್ ಪುನಿಯಾ ಸೇರಿದಂತೆ ಹಲವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಕುಸ್ತಿಪಟುಗಳನ್ನು ಮನಸೋ ಇಚ್ಛೆ ನಡೆಸಿಕೊಂಡಿರೋದು ಚರ್ಚೆಗೆ ಕಾರಣವಾಗಿದೆ.