Connect with us

    DAKSHINA KANNADA

    ಇದೊಂದು ವ್ಯವಸ್ಥಿತ ಸಂಚು; ದೇಶದಲ್ಲಿ ಮತ್ತೆ ಉಗ್ರರ ಚಟುವಟಿಕೆ ಶುರುವಾಗಿದೆ: ನಳೀನ್ ಕುಮಾರ್ ಕಟೀಲ್

    ಮಂಗಳೂರು, ಜೂನ್ 29:  ರಾಜಸ್ಥಾನದ ಉದಯಪುರದಲ್ಲಿ ನಡೆದ ಕೊಲೆ ಪ್ರಕರಣ ಒಂದು ವ್ಯವಸ್ಥಿತ ಸಂಚು, ದೇಶದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆ ಶುರುವಾಗಿದ್ದು, ಈ ಹಿಂದೆ ಇದೇ ಮಾದರಿಯಲ್ಲಿ ಶಿವಮೊಗ್ಗದಲ್ಲೂ ಹರ್ಷನ ಹತ್ಯೆ ‌ನಡೆದಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

    ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ನಳಿನ್ ಕುಮಾರ್ ಕಟೀಲ್ “ಹಿಂದು ಕಾರ್ಯಕರ್ತ ಹರ್ಷನ ಕತ್ತು ಕೊಯ್ದು ಅದರ ವೀಡಿಯೋವನ್ನು ಆತನ ಸೋದರನಿಗೆ ಕಳಿಸಲಾಗಿತ್ತು. ಅದನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸಿ ಕಠಿಣ ಕ್ರಮ ಕೈಗೊಂಡಿತ್ತು.

    ನೂಪುರ್ ಶರ್ಮಾ ಹೇಳಿಕೆ ನಂತರ ದೇಶದಲ್ಲಿ ನಡೆದಂತಹ ಘಟನೆಗಳು, ಗಲಭೆಗಳ ಹಿಂದೆ ವಿದೇಶಿ ಶಕ್ತಿಗಳ ಕೈವಾಡ ಸ್ಪಷ್ಟವಾಗಿದೆ. ರಾಜಸ್ಥಾನದಲ್ಲಿರುವ ಸರ್ಕಾರದ ತುಷ್ಟೀಕರಣ ನೀತಿ ಈ ಕೃತ್ಯಕ್ಕೆ, ಘಟನೆ ನಡೆಯಲು ಕಾರಣ. ಘಟನೆಯ ಕುರಿತು ಕಾಂಗ್ರೆಸ್ ಯಾಕೆ ಮೌನ ವಹಿಸಿದೆ. ಚಿಕ್ಕ- ಚಿಕ್ಕ ವಿಷಯಕ್ಕೆ ರಸ್ತೆಗೆ ಬರುವ ಚಿಂತಕರು ಈಗ ಎಲ್ಲಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

    ಇವರ ತುಷ್ಟೀಕರಣ ರಾಜನೀತಿ, ಇಂತಹ ಮಾನಸಿಕಕತೆ ಬೆಳೆಯಲು ಕಾರಣ. ದೇಶದಲ್ಲಿ ಜನರ ನಡುವೆ ಭಯ ಹುಟ್ಟಿಸುವ ತಂತ್ರ ಇದಾಗಿದೆ. ಮಾನವೀಯ ಗುಣಗಳಿಗೆ ಸವಾಲಾಗಿ ಪರಿಣಮಿಸಿದೆ ಎಂದು  ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಮಾನಸಿಕತೆಗಳಿಗೆ ಉತ್ತರ ಪ್ರದೇಶದ ಯೋಗಿ ಮಾದರಿ ನಿರ್ಧಾರಗಳ ಅವಶ್ಯಕತೆ ಇದೆ. ತಕ್ಷಣ ಕಠಿಣ ಕ್ರಮ ಜರುಗಿಸಬೇಕು, ಕೇಂದ್ರ ಸರ್ಕಾರ ಎನ್.ಐ.ಎ ಕಳುಹಿಸಿದೆ. ಏನು ಮಾಡಬೇಕೋ ಅದನ್ನು ಮಾಡಲಿದ್ದಾರೆ. ದೇಶದಲ್ಲಿ ನಿರಂತರ ಗಲಭೆ ಸೃಷ್ಟಿಸಲು, ಹತ್ಯೆ ಮಾಡಿ ಸಮಾಜ ಒಡೆಯುವ ಹುನ್ನಾರ ಇದರ ಹಿಂದಿದೆ.

    ಜಿಹಾದಿ ಹೆಸರಿನಲ್ಲಿ ಇಂತಹ ಕೃತ್ಯಗಳನ್ನು ಮಾಡಲಾಗ್ತಿದೆ. ಕಾಶ್ಮೀರದಲ್ಲಿ ಹಿಂದೆ ನಡೆದ ಘಟನೆಗಳು ಹೊರಗಡೆ ಬರ್ತಿವೆ. ಆದ್ರೆ ನರೇಂದ್ರ ಮೋದಿ ಸರ್ಕಾರ ಇದನ್ನ ಸಹಿಸಲ್ಲ, ತಡೆ ಹಾಕುತ್ತೆ. ಈ ರೀತಿಯ ಘಟನೆಗಳನ್ನು ಅಲ್ಲಲ್ಲೇ ನಿಯಂತ್ರಿಸುವ ಕೆಲಸ ಆಗಬೇಕು. ಕ್ರೂರಿ ಮಾನಸಿಕತೆಗಳಿಗೆ ಭಯದ ವಾತಾವರಣ ಸೃಷ್ಟಿಸಬೇಕು ಎಂದಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *