LATEST NEWS
ಡ್ರಗ್ಸ್ ನ ನಶೆಯಲ್ಲಿ ಸುತ್ತಿಗೆಯಲ್ಲಿ ಚಿಕ್ಕಪ್ಪನ ತಲೆ ಬುರುಡೆ ಪುಡಿ ಪುಡಿ – ಕೊಲೆ ರೀತಿ ನೋಡಿ ಕೇರಳ ಪೊಲೀಸರೇ ಶಾಕ್

ತಿರುವನಂತಪುರಂ ಫೆಬ್ರವರಿ 25: ಕೇರಳ ರಾಜ್ಯ ರಾಜಧಾನಿ ತಿರುವನಂತಪುರಂ ಬಳಿಯ ವೆಂಜರಮೂಡು ಪ್ರದೇಶದಲ್ಲಿ ನಡೆದ 5 ಮಂದಿಯ ಹತ್ಯಾಕಾಂಡಕ್ಕೆ ಕೇರಳ ಪೊಲೀಸ್ ಇಲಾಖೆಯೇ ಶಾಕ್ ಆಗಿದೆ. ಡ್ರಗ್ಸ್ ನಶೆಯಲ್ಲಿ ಕೊಲೆಗಡುಕ ಅಫಾನ್ ಮಾಡಿರುವ ಕೃತ್ಯ ಬೆಚ್ಚಿ ಬಿಳಿಸುವಂತಿದೆ.
ತಿರುವನಂತಪುರದ ವೆಂಜರಮೂಡ್ ನಿವಾಸಿ ಅಫಾನ್ (23) ಸಾಮೂಹಿಕ ನರಮೇಧ ನಡೆಸಿರುವ ತಲೆಗೆಟ್ಟ ಯುವಕ. ಸೋಮವಾರ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯ ನಡುವೆ 26 ಕಿಮೀ ಆಸುಪಾಸಿನಲ್ಲಿ ಬೈಕಿನಲ್ಲಿ ಸುತ್ತಾಡಿ ಬೇರೆ ಬೇರೆ ಮನೆಗಳಿಗೆ ತೆರಳಿ ತನ್ನ ಅತ್ಯಾಪ್ತರನ್ನೇ ಕೊಂದು ಹಾಕಿದ್ದಾನೆ.

ಇದೀಗ ಕೊಲೆಗೂ ಮೊಲು ಆರೋಪಿ ಅಫಾನ್ ಡ್ರಗ್ಸ್ ತೆಗೆದುಕೊಂಡಿದ್ದ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಡಿವೈಎಸ್ಪಿ ಅರುಣ್ ಮಾಧ್ಯಮಗಳ ಜೊತೆ ಮಾತನಾಡಿ ಆರೋಪಿ ಡ್ರಗ್ಸ್ ತೆಗೆದುಕೊಂಡಿರುವ ಬಗ್ಗೆ ಬೆಂಬಲಿಸುವ ಪುರಾವೆಗಳು ಕಂಡುಬಂದಿವೆ, ಆದಾಗ್ಯೂ, ಬಳಸಲಾದ ನಿಖರವಾದ ವಸ್ತುವನ್ನು ನಿರ್ಧರಿಸಲು ಹೆಚ್ಚಿನ ವೈಜ್ಞಾನಿಕ ವಿಶ್ಲೇಷಣೆ ಅಗತ್ಯವಿದೆ ಎಂದು ಹೇಳಿದರು.
ಕೇರಳದಲ್ಲಿ ನಡೆದ ಇಡೀ ಹತ್ಯಾಕಾಂಡ ಮಾತ್ರ ದಿಗ್ಭ್ರಮೆಗೊಳಿಸುವಂತಿದೆ. ಅಫಾನ್ ಅವರ ಚಿಕ್ಕಪ್ಪ ಲತೀಫ್ ಮತ್ತು ಅವರ ಪತ್ನಿ ಶಾಹಿದಾ ಅವರನ್ನು ಆರೋಪಿ ಕ್ರೂರವಾಗಿ ಥಳಿಸಿ ಕೊಲೆ ಮಾಡಿದ್ದಾನೆ. ಚಿಕ್ಕಪ್ಪನ ತಲೆಯನ್ನು ಸುತ್ತಿಗೆಯಿಂದ ಹೊಡೆದು ಬರುಡೆಯನ್ನು ಪುಡಿ ಪುಡಿ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಯಾವುದೇ ವಸ್ತುವನ್ನು ಆರೋಪಿ ದರೋಡೆ ಮಾಡಿಲ್ಲ. ಹೀಗಾಗಿ ಈ ಕೊಲೆ ಪ್ರಕರಣಕ್ಕೆ ಪ್ರಮುಖ ಕಾರಣವೇನು ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.