LATEST NEWS
`ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೂ ಪಹಲ್ಗಾಮ್ ಘಟನೆಗೂ ವ್ಯತ್ಯಾಸವಿಲ್ಲ: ಪೇಜಾವರ ಶ್ರೀ

ಉಡುಪಿ, ಏಪ್ರಿಲ್ 23: ಪಹಲ್ಗಾಮ್ ದುರ್ಘಟನೆಯಿಂದ ಬಹಳ ಆಘಾತವಾಗಿದೆ. `ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೂ ಈ ಘಟನೆಗೂ ವ್ಯತ್ಯಾಸವಿಲ್ಲ ಎಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಪಹಲ್ಗಾಮ್‌ನಲ್ಲಿ ಹಿಂದೂಗಳ ಮೇಲೆ ಉಗ್ರರು ದಾಳಿ ನಡೆಸಿದ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆ ಕಡೆ ಪಶ್ಚಿಮ ಬಂಗಾಳ, ಈ ಕಡೆ ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ವ್ಯತಿರಿಕ್ತ ಇಲ್ಲದೇ ಈ ಘಟನೆ ನಡೆದಿದೆ.

ಈ ಘಟನೆ ಬಹಳ ಆಘಾತಕಾರಿ, ಸರ್ಕಾರ ಇದಕ್ಕೆ ಬಲವಾದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇಂತಹ ಘಟನೆ ದೇಶದಲ್ಲೆಲ್ಲೂ ಮರುಕಳಿಸಬಾರದು. ದೇಶದೊಳಗೆ ಸೂಕ್ತ ಭದ್ರತೆ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಮನವಿ ಮಾಡುತ್ತೇನೆ ಎಂದು ಹೇಳಿದರು.