DAKSHINA KANNADA
ವಾಮಮಾರ್ಗದ ಮೂಲಕ ನನ್ನನ್ನು ಸೋಲಿಸುವ ಪ್ರಯತ್ನ ನಡೆದಿದೆ: ಅರುಣ್ ಕುಮಾರ್ ಪುತ್ತಿಲ
ಪುತ್ತೂರು, ಮೇ 18: ವಾಮಮಾರ್ಗದ ಮೂಲಕ ನನ್ನನ್ನು ಸೋಲಿಸುವ ಪ್ರಯತ್ನ ನಡೆದಿದೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ತತ್ವ ಸಿದ್ಧಾಂತಗಳನ್ನು ಮೀರಿ ನನ್ನ ವಿರುದ್ಧ ಅಪಪ್ರಚಾರ ಮಾಡಲಾಗಿದೆ ಎಂದು ಪುತ್ತೂರು ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಹೇಳಿದ್ದಾರೆ.
ಪುತ್ತೂರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ಸಂಘದ ಕೆಲವು ಮುಖಂಡರೇ ನನಗೆ ಮತ ಹಾಕದಂತೆ ಕಾರ್ಯಕರ್ತರಿಗೆ ಒತ್ತಡ ಹಾಕಿದ್ದಾರೆ. ಕಾರ್ಯಕರ್ತರ ಮನೆಗೆ ಹೋಗಿ ಅವರ ತಂದೆ ತಾಯಿ ಫೋಟೋ ಹಿಡಿದು ಪ್ರಮಾಣ ಮಾಡಿಸಿದ್ದಾರೆ. ಪ್ರಮಾಣಕ್ಕೆ ವಿರುದ್ಧವಾಗಿ ನನಗೆ ಮತ ಹಾಕಿದರೆ ತಂದೆ-ತಾಯಿ ಸಾಯುತ್ತಾರೆ ಎನ್ನುವ ಬೆದರಿಕೆ ಹಾಕಿದ್ದಾರೆ.
ದೇವರ ಫೋಟೋ ಮೇಲೆ ಆಣೆ ಹಾಕಿಸಿದ್ದಾರೆ. ಇಂಥ ಕೆಳಮಟ್ಟಕ್ಕೆ ಸಂಘ ಇಳಿಯಬಾರದಿತ್ತು. ಬಿಜೆಪಿ ಮುಖಂಡರ ಬ್ಯಾನರ್ ಹಾಕಿದ ಹಿಂದೂ ಕಾರ್ಯಕರ್ತರ ಮೇಲೆ ಅಮಾನುಷವಾಗಿ ನಡೆಸಲಾಗಿದೆ. ಆದರೆ ಹಿಂದೂ ಯುವತಿಯ ಮೇಲೆ ದೌರ್ಜನ್ಯ ಮಾಡಿದ ಅನ್ಯಮತೀಯನ ಮೇಲೆ ಇಂಥ ಶಿಕ್ಷೆ ವಿಧಿಸಲು ಯಾರಿಗೂ ಸಾಧ್ಯವಾಗಿಲ್ಲ.
ದೌರ್ಜನ್ಯಕ್ಕೊಳಗಾದ ಕಾರ್ಯಕರ್ತರನ್ನು ವಿಚಾರಿಸುವ ಸೌಜನ್ಯವನ್ನೂ ಸ್ಥಳೀಯ ಬಿಜೆಪಿ ಮುಖಂಡರು ಮಾಡಿಲ್ಲ ಎಂದು ಅರುಣ್ ಕುಮಾರ್ ಪುತ್ತಿಲ ಆರೋಪ ಮಾಡಿದ್ದಾರೆ.