Connect with us

    DAKSHINA KANNADA

    ಪುತ್ತೂರು – ಹೊಟೇಲ್ ಸಪ್ಲೈಯರ್ ಕೈಚಳಕ ಸಿಸಿಟಿವಿಯಲ್ಲಿ ಸೆರೆ

    ಪುತ್ತೂರು ಫೆಬ್ರವರಿ 12: ಹೊಟೇಲ್ ನಲ್ಲಿ ಸಪ್ಲೈಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯ ಹೊಟೇಲ್ ನಲ್ಲಿ ಮೊಬೈಲ್ ಕದ್ದು ಪರಾರಿಯಾದ ಘಟನೆ ಪುತ್ತೂರಿನ ನೆಹರೂನಗರದ ಕೋಕೋ ಗುರು ಅಡುಗೆಮನೆ ಎಂಬ ಹೊಟೇಲ್ ನಡೆದಿದೆ. ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಮಾಹಿತಿ ಪ್ರಕಾರ ಪೊಲೀಸರು ಆರೋಪಿಯನ್ನು ಬಂದಿಸಿದ್ದಾರೆ ಎಂದು ತಿಳಿದು ಬಂದಿದೆ.


    ಸಪ್ಲೆಯ‌ರ್ ಗಣೇಶ್ ಎಂಬಾತ 69 ಸಾವಿರ ರೂ. ಮೌಲ್ಯದ ಮೊಬೈಲ್ ನೊಂದಿಗೆ ಪರಾರಿಯಾದಾತ. ಈತ ನೆಹರೂನಗರದ ಕೋಕೋಗುರು ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದು, ಮಧ್ಯಾಹ್ನ ಈತ ತಾನು ಕ್ಯಾಶ್ ಕೌಂಟರ್ ನೋಡಿಕೊಳ್ಳುವುದಾಗಿ ಹೇಳಿ ಕ್ಯಾಶಿಯರನ್ನು ಊಟಕ್ಕೆ ಕಳುಹಿಸಿದ್ದಾನೆ. ಕ್ಯಾಶಿಯರ್ ಊಟಕ್ಕೆ ತೆರಳುತ್ತಿದ್ದಂತೆ ಡ್ರವರ್‌ ನಲ್ಲಿದ್ದ ಬೆಲೆಬಾಳುವ ಮೊಬೈಲ್ ನೊಂದಿಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಸಪ್ಲೆಯರ್ ನ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *