Connect with us

    LATEST NEWS

    ಆ್ಯಪಲ್ ಶೋರೂಂ ಗೆ ನುಗ್ಗಿದ ಕಳ್ಳರು – 70 ಲಕ್ಷಕ್ಕೂ ಅಧಿಕ ಮೌಲ್ಯದ ಮೊಬೈಲ್ ಕಳವು

    ಮಂಗಳೂರು ಜುಲೈ 05: ನಗರದ ಬಲ್ಮಠದಲ್ಲಿರುವ ಆ್ಯಪಲ್ ಶೋರೂಂ ಗೆ ಕಳ್ಳರು ನುಗ್ಗಿ 70 ಲಕ್ಷ ಮೌಲ್ಯದ ಮೊಬೈಲ್ ಪೋನ್ ಗಳನ್ನು ಕಳ್ಳತನ ಮಾಡಿರುವ ಘಟನೆ ಇಂದು ಬೆಳಕಿಗೆ ಬಂದಿದೆ.

    ವಿಕೇಂಡ್ ಲಾಕ್ ಡೌನ್ ಹಿನ್ನಲೆ ಇಂದು ಬೆಳಿಗ್ಗೆ ಶೋರೂಂ ತೆರೆದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ. ಶೋರೂಂ ನ ಹಿಂದಿನ ಕಿಟಕಿಯನ್ನು ಒಡೆದು ನುಗ್ಗಿರುವ ಕಳ್ಳರು ಬೆಲೆ ಬಾಳುವ ಮೊಬೈಲ್ ಪೋನ್ ಗಳನ್ನು ದೋಚಿದ್ದಾರೆ.
    ಕಳ್ಳತನ ನಡೆದಿರುವುದು ಇಂದು ಬೆಳಗ್ಗೆ ಶೋರೂಂ ಸಿಬ್ಬಂದಿ ಗಮನಕ್ಕೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಕೂಡ ಈ ಶೋರೂಂನಲ್ಲಿ ಕಳ್ಳತನ ನಡೆದಿತ್ತು.

    Share Information
    Advertisement
    Click to comment

    Leave a Reply

    Your email address will not be published. Required fields are marked *