KARNATAKA
ಬಾಲಿವುಡ್ ನಟಿ ಗರ್ಲ್ ಫ್ರೆಂಡ್ – 180ಕ್ಕೂ ಅಧಿಕ ಕಳ್ಳತನ ಪ್ರಕರಣ ಕಳ್ಳನ ಬಿಂದಾಸ್ ಲೈಫ್
ಬೆಂಗಳೂರು ಫೆಬ್ರವರಿ 04: ಕಳ್ಳನೊಬ್ಬ ಕಳ್ಳತನದಲ್ಲಿ ಬಾಲಿವುಡ್ ನಟಿ ಜೊತೆ ಪ್ರೀತಿ ಅಲ್ಲದೆ ಕಲ್ಕತ್ತಾದಲ್ಲಿ ಗರ್ಲ್ ಫ್ರೆಂಡ್ ಗೆ ಕೋಟಿ ಬೆಲೆಬಾಳುವ ಮನೆ ಕಟ್ಟಿಕೊಟ್ಟಿದ್ದು, ಇದೀಗ ಮತ್ತೆ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಈ ಕಳ್ಳನ ಹೆಸರು ಪಂಚಾಕ್ಷರಿ ಸ್ವಾಮಿ. ಈತ ಮಹಾರಾಷ್ಟ್ರ ಮೂಲದ ನಿವಾಸಿ. ಬಾಲಿವುಡ್‌ನ ಖ್ಯಾತ ನಟಿಯೊಂದಿಗೆ ಈ ಕಳ್ಳನ ನಂಟು ಇದೆ ಎಂದು ತಿಳಿದು ಬಂದಿದೆ. ಕಳ್ಳತನ ಮಾಡಿದ್ದ ಹಣದಿಂದಲೇ ಮೂರು ಕೋಟಿ ಬೆಲೆ ಬಾಳುವ ಬಂಗಲೆಯನ್ನು ಕಟ್ಟಿಸಿದ್ದ ಈ ಖತರ್ನಾಕ್ ಕಳ್ಳ ತಾನು ಸಿಂಗಲ್ ರೂಮ್‌ನಲ್ಲಿ ವಾಸವಿದ್ದನು. ಮದುವೆಯಾಗಿದ್ದರೂ ಕೂಡ ಬಾಲಿವುಡ್ ನಟಿ ಈತನಿಗೆ ಗರ್ಲ್‌ಫ್ರೆಂಡ್ ಆಗಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ತಾನಿರೋದು 400 ಅಡಿ ಚದರ ಅಡಿಯ ಸಣ್ಣ ಮನೆಯಲ್ಲಿ, ಆದರೆ ಕಳ್ಳತನ ಮಾಡಿದ ಹಣದಲ್ಲಿ ಈತ ಬಾಲಿವುಡ್ ನಟಿಗೆ ಬಂಗಲೆಯನ್ನು ಕಟ್ಟಿಸಿಕೊಟ್ಟಿದ್ದಾನೆ.
2003ರಲ್ಲಿ ಅಪ್ರಾಪ್ತನಿದ್ದಾಗಲೇ ಪಂಚಾಕ್ಷರಿ ಕಳ್ಳತನ ಶುರು ಮಾಡಿದ್ದನು. 2009ರಿಂದ ಪ್ರೊಫೆಶನಲ್ ಕಳ್ಳನಾದ. ಬಂಧಿತ ಕಳ್ಳ ಪಂಚಾಕ್ಷರಿ ಸ್ವಾಮಿ ತಂದೆ ರೈಲ್ವೆ ಕೆಲಸದಲ್ಲಿದ್ದರು. ತಂದೆ ಸಾವಿನ ಬಳಿಕ ತಾಯಿಗೆ ರೈಲ್ವೆಯಲ್ಲಿ ಕೆಲಸ ಸಿಗುತ್ತದೆ. 2016ರಲ್ಲಿ ಈತನ ಕಳ್ಳತನ ವಿಚಾರ ಬಯಲಾಗಿ ಗುಜರಾತ್ ಪೊಲೀಸರು ಬಂಧಿಸಿದ್ದರು. ಆರು ವರ್ಷ ಗುಜರಾತ್ ಸಬರಮತಿ ಜೈಲಿನಲ್ಲಿದ್ದ ಈ ಆರೋಪಿ, ಹೊರ ಬಂದ ಬಳಿಕ ಮತ್ತೆ ಕಳ್ಳತನ ಶುರು ಮಾಡಿದ್ದನು. ಹೀಗಾಗಿ ಮತ್ತೆ ಪಂಚಾಕ್ಷರಿ ಮಹಾರಾಷ್ಟ್ರದಲ್ಲಿ ಬಂಧನಕ್ಕೊಳಗಾಗಿದ್ದನು. ಈ ಜೈಲಿನಿಂದ ಅಕ್ಟೋಬರ್‌ನಲ್ಲಿ ಹೊರ ಬಂದ ಬಳಿಕ 2024ರಲ್ಲಿ ಮತ್ತೆ ಬೆಂಗಳೂರಿನಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ. ಈತ ಈವರೆಗೂ ದೇಶದಾದ್ಯಂತ ಸುಮಾರು 180 ಮನೆಗಳಲ್ಲಿ ಕಳ್ಳತನ ಮಾಡಿದ್ದಾನೆ. ಈ ಹಣವನ್ನು ಈತ ಸಂಪೂರ್ಣವಾಗಿ ಶೋಕಿ ಮಾಡಲು ಬಳಕೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಬಾಲಿವುಡ್ ನಟಿ ಮಾತ್ರವಲ್ಲದೆ ಹಲವಾರು ಗರ್ಲ್ಸ್ ಫ್ರೆಂಡ್ ಕೂಡ ಈತ ಹೊಂದಿದ್ದನು. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಒಂದು ವಿಶೇಷ ಅಂದರೆ ಕಳ್ಳತನದಲ್ಲಿ ಕೋಟಿ, ಕೋಟಿ ದೋಚಿದ್ದರೂ ಪಂಚಾಕ್ಷರಿ ಮಾತ್ರ 400 ಅಡಿಯಲ್ಲಿ ಮನೆಯಲ್ಲಿ ವಾಸವಿದ್ದ. ಆ ಮನೆಯು ತಾಯಿಯ ಹೆಸರಲ್ಲಿ ಇದ್ದು, ಆ ಮನೆಗೆ ಬ್ಯಾಂಕ್ ಲೋನ್ ಕಟ್ಟದೆ ನೋಟಿಸ್ ಜಾರಿಯಾಗಿದೆ. ಸಾಲ ಕಟ್ಟದ ಹಿನ್ನೆಲೆಯಲ್ಲಿ ಬ್ಯಾಂಕ್ನಿಂದ ಆ ಮನೆಯನ್ನ ಸಹ ಹರಾಜಿಗಿಡಲಾಗಿದೆ.