LATEST NEWS
ವಿಶ್ವದ ಅತಿದೊಡ್ಡ ವಿಮಾನ ಪುಡಿ ಮಾಡಿದ ರಷ್ಯಾ…!!
ಉಕ್ರೇನ್ : ಉಕ್ರೇನ್ ನಲ್ಲಿರುವ ವಿಶ್ವದ ಅತಿದೊಡ್ಡ ವಿಮಾನ ಮ್ರಿಯಾ ಎಎನ್ 225 ನ್ನು ರಷ್ಯಾದ ವಾಯುಪಡೆ ನಾಶಗೊಳಿಸಿದೆ. AN-225 ಅನ್ನು ಕೀವ್ ಬಳಿಯ ಗೊಸ್ಟೊಮೆಲ್‌ನಲ್ಲಿರುವ ಆಂಟೊನೊವ್ ವಿಮಾನ ನಿಲ್ದಾಣದಲ್ಲಿ ರಷ್ಯಾದ ಆಕ್ರಮಣಕಾರರು ನಾಶಪಡಿಸಿದ್ದಾರೆ’ ಎಂದು ಉಕ್ರೊಬೋರಾನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಜಗತ್ತಿನಲ್ಲೇ ಅತ್ಯಂತ ವಿಶೇಷ ಎನಿಸಿದ್ದ ಈ ವಿಮಾನವು 84 ಮೀಟರ್ ಉದ್ದ (276 ಅಡಿ) ಇತ್ತು. ಗಂಟೆಗೆ 850 ಕಿಲೋಮೀಟರ್ ವೇಗದಲ್ಲಿ 250 ಟನ್‌ಗಳಷ್ಟು ಸರಕುಗಳನ್ನು ಸಾಗಿಸಬಲ್ಲ ಶಕ್ತಿ ಹೊಂದಿತ್ತು.
ರಷ್ಯಾದ ಆಕ್ರಮಣ ಪ್ರಾರಂಭದಿಂದಲೂ ಗೊಸ್ಟೊಮೆಲ್ ವಿಮಾನ ನಿಲ್ದಾಣವು ಹಿಂಸಾತ್ಮಕ ಘರ್ಷಣೆಗೆ ಸಾಕ್ಷಿಯಾಗಿದೆ. ವ್ಯೂಹಾತ್ಮಕ ಮೂಲಸೌಕರ್ಯವನ್ನು ವಶಪಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದೆ ಎಂದು ರಷ್ಯಾದ ಸೇನೆ ಹೇಳಿದೆ. ಮ್ರಿಯಾ ವಿಮಾನವನ್ನು ರಿಪೇರಿ ಮಾಡಲು 3 ಶತಕೋಟಿ ಡಾಲರ್ (₹22,713 ಕೋಟಿ) ವೆಚ್ಚವಾಗಲಿದೆ. ಮತ್ತು, ಐದು ವರ್ಷಗಳಷ್ಟು ಸಮಯ ಬೇಕಾಗುತ್ತದೆ ಎಂದು ‘ಉಕ್ರೊಬೊರೊನ್‌ಪ್ರೊಮ್’ ಅಂದಾಜಿಸಿದೆ.