FILM
ಬಾಲಿವುಡ್ ನ ಹಿರಿಯ ನಟ ಮನೋಜ್ ಕುಮಾರ್ ಇನ್ನಿಲ್ಲ

ಮುಂಬೈ ಎಪ್ರಿಲ್ 04: ಬಾಲಿವುಡ್ ನ ಹಿರಿಯ ನಟ ನಿರ್ದೇಶಕ ಮನೋಜ್ ಕುಮಾರ್ ವಯೋಸಹಜ ಕಾಯಿಲೆಯಿಂದ ಸಾವನಪ್ಪಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.
ಮನೋಜ್ ಕುಮಾರ್ ಅವರಿಗೆ ಹಲವು ವಯೋ ಸಹಜ ಕಾಯಿಲೆಗಳು ಇದ್ದವು. ಅವರನ್ನು ಕೆಲ ವಾರಗಳ ಹಿಂದೆ ಮುಂಬೈನ ಕೊಕಿಲಾಬೇನ್ ಧೀರುಭಾಯ್ ಅಂಬಾನಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಮುಂಜಾನೆ 3.30ರ ಸುಮಾರಿಗೆ ಅವರು ನಿಧನಹೊಂದಿದ್ದಾರೆ.

ರಾಷ್ಟ್ರ ಪ್ರೇಮದ ಸಿನಿಮಾಗಳನ್ನು ಮಾಡಿ ಹೆಸರು ವಾಸಿ ಆಗಿದ್ದರು. ಈ ಕಾರಣಕ್ಕೆ ಅವರಿಗೆ ‘ಭಾರತ್ ಕುಮಾರ್’ ಎಂಬ ಹೆಸರನ್ನೂ ಇಡಲಾಗಿತ್ತು. ಇವರ ನಿಧನಕ್ಕೆ ಬಾಲಿವುಡ್ ಮಂದಿ ಸಂತಾಪ ಸೂಚಿಸುತ್ತಿದ್ದಾರೆ.
ಚಿತ್ರರಂಗಕ್ಕೆ ಮನೋಜ್ ಕುಮಾರ್ ಅವರ ಕೊಡುಗೆ ಅಪಾರವಾದದ್ದು. ಅವರ ನಿರ್ದೇಶನದಲ್ಲಿ ಮೂಡಿ ಬಂದ ‘ಉಪ್ಕಾರ್’ (1967) ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಕೇಂದ್ರ ಸರ್ಕಾರ ಅವರಿಗೆ ಪದ್ಮಶ್ರೀ (1992) ಹಾಗೂ ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ (2015) ನೀಡಿ ಗೌರವಿಸಿದೆ.