Connect with us

    LATEST NEWS

    ಸಾಮ್ರಾಟ್ ಛತ್ರಪತಿ ಶಿವಾಜಿ ಬಳಸುತ್ತಿದ್ದ ಐತಿಹಾಸಿಕ ಆಯುಧ ‘ವ್ಯಾಘ್ರ ನಖ’ ಶೀಘ್ರ ಭಾರತಕ್ಕೆ..!

    ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜ್ ಅವರು ಅಫ್ಜಲ್ ಖಾನ್‌ ನನ್ನು ಕೊಲ್ಲಲು ಬಳಸಿದ್ದು ಎನ್ನಲಾದ ಹುಲಿಯ ಪಂಜದ ರೀತಿಯ ‘ವ್ಯಾಘ್ರ ನಖ’ ಆಯುಧ ಶೀಘ್ರವೇ ಬ್ರಿಟನ್‌ ನಿಂದ ಭಾರತಕ್ಕೆ ಹಸ್ತಾಂತರವಾಗಲಿದೆ.

    ಮುಂಬೈ : ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜ್ ಅವರು ಅಫ್ಜಲ್ ಖಾನ್‌ ನನ್ನು ಕೊಲ್ಲಲು ಬಳಸಿದ್ದು ಎನ್ನಲಾದ ಹುಲಿಯ ಪಂಜದ ರೀತಿಯ ‘ವ್ಯಾಘ್ರ ನಖ’ ಆಯುಧ ಶೀಘ್ರವೇ ಬ್ರಿಟನ್‌ ನಿಂದ ಭಾರತಕ್ಕೆ ಹಸ್ತಾಂತರವಾಗಲಿದೆ.

    ಇದಕ್ಕೆ ಅಗತ್ಯವಿರುವ ಸಿದ್ದತೆಗಳನ್ನು ಮಹಾರಾಷ್ಟ್ರ ಸರ್ಕಾರ ಮಾಡಿಕೊಂಡಿದೆ. ಮುಂಬಯಿ: ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜ್ ಅವರು ಅಫ್ಜಲ್ ಖಾನ್‌ ನನ್ನು ಕೊಲ್ಲಲು ಬಳಸಿದ್ದು ಎನ್ನಲಾದ ಹುಲಿಯ ಪಂಜದ ರೀತಿಯ ‘ವ್ಯಾಘ್ರ ನಖ’ ಆಯುಧ ಶೀಘ್ರವೇ ಬ್ರಿಟನ್‌ ನಿಂದ ಭಾರತಕ್ಕೆ ಹಸ್ತಾಂತರವಾಗಲಿದೆ.

    ಇದಕ್ಕೆ ಅಗತ್ಯವಿರುವ ಸಿದ್ದತೆಗಳನ್ನು ಮಹಾರಾಷ್ಟ್ರ ಸರ್ಕಾರ ಮಾಡಿಕೊಂಡಿದೆ. ಛತ್ರಪತಿ ಶಿವಾಜಿ ಮಹಾರಾಜ್ ಅವರು 1659ರಲ್ಲಿ ಬಿಜಾಪುರ ಸುಲ್ತಾನನ ಸೇನಾಧಿಪತಿ ಅಫ್ಜಲ್‌ ಖಾನ್‌ನನ್ನು ಇದೇ ಆಯುಧ ಬಳಸಿ ಹತ್ಯೆ ಮಾಡಿದ್ದರು ಎಂದು ನಂಬಲಾಗಿದೆ.

    ಈ ಚಾರಿತ್ರ್ಯಿಕ ಮಹತ್ವ ಹೊಂದಿರುವ ಆಯುಧ ಪ್ರಸ್ತುತ ಲಂಡನ್‌ನ ವಿಕ್ಟೋರಿಯಾ ಆಲ್ಬರ್ಟ್ ಮ್ಯೂಸಿಯಂನಲ್ಲಿದೆ. ಸತಾರಾ ಕೋರ್ಟ್‌ನಲ್ಲಿ ಶಿವಾಜಿ ಮಹಾರಾಜರ ವಂಶಸ್ಥರ ಸ್ವಾಧೀನದಲ್ಲಿ ಇದ್ದ ಈ ವಿಶಿಷ್ಟ ಆಯುಧವನ್ನು ಈಸ್ಟ್ ಇಂಡಿಯಾ ಕಂಪೆನಿ ಅಧಿಕಾರಿ ಜೇಮ್ಸ್ ಗ್ರಾಂಟ್ ಡಫ್ ಎಂಬಾತನಿಗೆ ನೀಡಲಾಗಿತ್ತು.

    ಭಾರತದಲ್ಲಿನ ತನ್ನ ಅಧಿಕಾರ ಅವಧಿ ಮುಗಿದ ಬಳಿಕ ಡಫ್, ವ್ಯಾಘ್ರ ನಖವನ್ನು ಬ್ರಿಟನ್‌ಗೆ ಕೊಂಡೊಯ್ದಿದ್ದು ಬಳಿಕ ಡಫ್‌ನ ವಂಶಸ್ಥರು ಅದನ್ನು ಮ್ಯೂಸಿಯಂಗೆ ದಾನವಾಗಿ ನೀಡಿದ್ದರು.

    ಮಹಾರಾಷ್ಟ್ರದ ಸಂಸ್ಕೃತಿ ವ್ಯವಹಾರಗಳ ಸಚಿವ ಸುಧೀರ್ ಮುಂಗಂಟಿವರ್ ಅವರು, ಶಿವಾಜಿ ಮಹಾರಾಜ್ ಬಳಸುತ್ತಿದ್ದ ಈ ಐತಿಹಾಸಿಕ ವ್ಯಾಘ್ರ ನಖ ಆಯುಧವನ್ನು ಮರಳಿ ಭಾರತಕ್ಕೆ ತರಲು ಶ್ರಮಿಸಿದ್ದಾರೆ.

    ಈ ಸಂಬಂಧ ಅವರು ವಿಕ್ಟೋರಿಯಾ ಆಂಡ್ ಆಲ್ಬರ್ಟ್ ಮ್ಯೂಸಿಯಂ ಜತೆ ಒಪ್ಪಂದವೊಂದಕ್ಕೆ (MOU ) ಸಹಿ ಹಾಕಲಿದ್ದಾರೆ.

    ಸಂಸ್ಕೃತಿ ವ್ಯವಹಾರಗಳ ಸಚಿವರು, ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಪುರತತ್ವ ಮತ್ತು ಮ್ಯೂಸಿಯಂ ನಿರ್ದೇಶನಾಲಯದ ನಿರ್ದೇಶಕರು ವಿಕ್ಟೋರಿಯಾ ಆಂಡ್ ಆಲ್ಬರ್ಟ್ ಮ್ಯೂಸಿಯಂ ಹಾಗೂ ಲಂಡನ್‌ನ ಇತರೆ ಮ್ಯೂಸಿಯಂಗಳಿಗೆ ಸೆ 29ರಿಂದ ಅ 4ರವರೆಗೂ ಭೇಟಿ ನೀಡಲಿದ್ದಾರೆ.

    ಈ ನಿಯೋಗದ ಆರು ದಿನಗಳ ಪ್ರವಾಸಕ್ಕೆ ಸಿಎಂ ಏಕನಾಥ್ ಶಿಂಧೆ ಅವರು 50 ಲಕ್ಷ ರೂ ಮಂಜೂರು ಮಾಡಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ್ ಅವರ ‘ವ್ಯಾಘ್ರ ನಖ’ವು ಇತಿಹಾಸದ ಬೆಲೆಕಟ್ಟಲಾಗದ ಅಮೂಲ್ಯ ನಿಧಿಯಾಗಿದೆ. ರಾಜ್ಯದ ಜನತೆಯ ಭಾವನೆಗಳಿಗೆ ಅದರ ಜತೆ ನಂಟು ಇದೆ ಎಂದು ಮಹಾರಾಷ್ಟ್ರ ಸರ್ಕಾರದ ಹೇಳಿಕೆ ತಿಳಿಸಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *