KARNATAKA
ಬಯಲಾಗುತ್ತಿದೆ ಪ್ರವೀಣನ ಕರ್ಮಕಾಂಡ, ಕಿರಾತಕನ ಐಷಾರಾಮಿ ಬದುಕಿನ ಗುಟ್ಟೇನು..!!?
ಉಡುಪಿ : ಉಡುಪಿ ನೇಜಾರು ಹತ್ಯಾಕಾಂಡದ ಆರೋಪಿ ಏರ್ ಇಂಡಿಯಾ ಕ್ಯಾಬಿನ್ ಕ್ರೂ ಉದ್ಯೋಗಿ ಪ್ರವೀಣ್ ಅರುಣ್ ಚೌಗುಲೆಯ ಜೀವನದ ಒಂದೋದೇ ಕರ್ಮಕಾಂಡ ಬಯಲಾಗುತ್ತಿದೆ. ಹಂತಕ ಪ್ರವೀಣ್ ಚೌಗಲೆ ಪತ್ನಿಗೂ ನಿತ್ಯ ಚಿತ್ರ ಹಿಂಸೆ ನೀಡುತ್ತಿದ್ದ ಎನ್ನುವ ಅಂಶ ಬೆಳಕಿಗೆ ಬಂದಿದೆ.
ಚೌಗುಲೆ ಕುಟುಂಬದ ಹಿನ್ನೆಲೆಯ ಕುರಿತು ನಡೆಸಿದ ತನಿಖಾ ವರದಿಯಲ್ಲಿ ಇಂತಹ ಅನೇಕ ಆತಂಕಕಾರಿ ಅಂಶಗಳು ಬಹಿರಂಗಗೊಂಡಿವೆ.ಅರುಣ್ ಚೌಗುಲೆ ಕುಟುಂಬ ಮಹಾರಾಷ್ಟ್ರದಲ್ಲಿದ್ದು, ಈತ ಅಲ್ಲಿ ಪೊಲೀಸ್ ಇಲಾಖೆಯಲ್ಲೂ ಕೆಲ ಸಮಯ ಕರ್ತವ್ಯ ನಿರ್ವಹಿಸಿದ್ದ. ಈತನ ಹತ್ತಿರದ ಸಂಬಂಧಿಕರು ಈಗಲೂ ಸೇನೆಯಲ್ಲೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈತ ಮಾತ್ರ ವಿಚಿತ್ರ ಮನಸ್ಥಿತಿ ಹೊಂದಿದ್ದು, ತನ್ನ ಪತ್ನಿಯನ್ನೂ ಅನುಮಾನ ದೃಷ್ಟಿಯಿಂದ ನೋಡುತ್ತಿದ್ದ. ಮನೆಯಲ್ಲಿ ಚಹಾ ಹುಡಿ, ಸಕ್ಕರೆ ಮುಗಿದರೂ ಅಂಗಡಿಗೆ ಹೋಗಿ ಅದನ್ನು ತರುವ ಸ್ವಾತಂತ್ರ್ಯ ಪತ್ನಿಗೆ ಇರಲಿಲ್ಲವಂತೆ. ಆತ ಡ್ಯೂಟಿ ಮುಗಿಸಿ ಬಂದ ಬಳಿಕ ಪತ್ನಿ ಜತೆ ಹೋಗಿ ಸಾಮಗ್ರಿ ಖರೀದಿಸುತ್ತಿದ್ದ. ಪತ್ನಿ ಮಹಾರಾಷ್ಟ್ರದ ಸಂಪ್ರದಾಯಸ್ಥ ಕುಟುಂಬಕ್ಕೆ ಸೇರಿದವಳಾಗಿದ್ದು, ಪತಿಯ ಹಿಂಸೆಗೆ ಪ್ರತಿರೋಧ ತೋರದೆ ಹೊಂದಾಣಿಕೆ ಮಾಡಿಕೊಂಡು ಸಂಸಾರ ಸಾಗಿಸುತ್ತಿದ್ದಳು. ಆದರೆ ಅನುಮಾನ ಪಿಶಾಚಿಯಾಗಿದ್ದ ಚೌಗುಲೆ ಸಣ್ಣ ಪುಟ್ಟ ವಿಷಯಗಳಲ್ಲೂ ಕ್ರೋಧಗೊಂಡು ಎರಡು ಬಾರಿ ತನ್ನ ಪತ್ನಿಯ ಕೊಲೆ ಮಾಡಲು ಮುಂದಾಗಿದ್ದ.ಆದ್ರೆ ಉದ್ಯೋಗ ತೆಗೆಸಿಕೊಡುವುದು, ತುರ್ತು ಸಂದರ್ಭಗಳಲ್ಲಿ ಪರರಿಗೆ ಸಹಾಯ ಮಾಡುವುದನ್ನು ರೂಢಿಸಿಕೊಂಡಿದ್ದ. ಇದರಿಂದಾಗಿ ಆತನ ಬಗ್ಗೆ ಯಾರಿಗೂ ಕೆಟ್ಟ ಭಾವನೆಯೇ ಇರಲಿಲ್ಲ. ಇದೇ ರೀತಿ ಉಡುಪಿ ನೇಜಾರಿನ ಅಯ್ನಾಝ್ ಕುಟುಂಬಕ್ಕೂ ಸಹಾಯ ಮಾಡಿರುವ ಅನುಮಾನವಿದ್ದು, ತನಿಖೆಯಿಂದ ತಿಳಿದು ಬರಬೇಕಿದೆ. ನೇಜಾರಿನ ಮನೆಗೂ ಹೋಗಿದ್ದ ಈತ ಅಯ್ನಾಝ್‌ಳನ್ನು ತುಂಬಾ ಹಚ್ಚಿಕೊಂಡಿದ್ದ. ಈತನ ದೈನಂದಿನ ಚಟುವಟಿಕೆಗಳನ್ನು ಆಕೆಯೊಂದಿಗೆ ಶೇರ್ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಇದುವೇ ಆಕೆ ಮತ್ತು ಆಕೆಯ ಕುಟುಂಬಿಕರ ಕೊಲೆಗೆ ಹೇತುವಾಯಿತು ಎನ್ನಲಾಗಿದೆ. ಉದ್ಯೋಗಕ್ಕೆ ಹೊಸದಾಗಿ ಸೇರಿಕೊಂಡಿದ್ದ ಅಯ್ನಾಝ್ ಏರ್ ಇಂಡಿಯಾದಲ್ಲಿ ಹಿರಿಯ ಸಿಬಂದಿಯಾಗಿದ್ದ ಚೌಗಲೆಯಿಂದ ಸಾಕಷ್ಟು ಕಲಿತಿದ್ದಳು ಮತ್ತು ಸಹಜವಾಗಿಯೇ ತೀರ ಆತ್ಮೀಯತೆಯಿಂದ ಇದ್ದಳು. ಇದೇ ಆಕೆಯ ಜೀವಕ್ಕೆ ಮುಳುವಾಗಿತ್ತು. ಅಯ್ನಾಝ್ ಳನ್ನು ಹೆಚ್ಚಾಗಿಯೇ ಹಚ್ಚಿಕೊಂಡಿದ್ದ ಪ್ರವೀಣ್ ಚೌಗಲೆ ಪ್ರೀತಿಸ ತೊಡಗಿದ. ಎಲ್ಲವನ್ನು ಅಯ್ನಾಝ್ ಅವಳೊಂದಿಗೆ ಶೇರ್ ಮಾಡಿಕೊಳ್ಳುತ್ತಿದ್ದ ಇವನ ಪ್ರೀತಿಯ ಬಲೆಗೆ ಬೀಳದೆ ಅಯ್ನಾಝ್ ನೇರವಾಗಿ ನೀರಾಕರಿಸಿದ್ದಳು. ಇದು ದಿನ ಹೋದಂತೆ ಜಿದ್ದಾ ಜಿದ್ದಿಗೆ ಬಿದ್ದ ಪ್ರವೀಣ್ ಅಯ್ನಾಝ್ ಪ್ರೀತಿಗೆ ದುಂಬಾಲು ಬಿದ್ದಿದ್ದ, ಯಾವಾಗ ಅಯ್ನಾಝ್ ನೇರವಾಗಿ ತಿರಸ್ಕಾರಿದ್ದಳೋ ಆದಾಗಲೇ ದ್ವೇ಼ಷ ಸಾಧನೆಗೆ ಮುಂದಾಗಿದ್ದ ಅದೇ ಮುಂದೆ ಅಯ್ನಾಝ್ ಮತ್ತು ಕುಟುಂಬದ ಸದಸ್ಯರ ಕೊಲೆಗೆ ಹೇತುವಾಗಿಯಿತು ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಪ್ರವೀಣ್ ಅರುಣ್ ಚೌಗುಲೆ ದಂಪತಿಗೆ ಇಬ್ಬರು ಮಕ್ಕಳಿದ್ದು ಹಿರಿಯ ಪುತ್ರ 10 ವರ್ಷದವನಾಗಿದ್ದರೆ, 2 ವರ್ಷದ ಮತ್ತೊಂದು ಪುಟ್ಟ ಮಗು. ಹಿರಿಯ ಮಗ 5ನೇ ತರಗತಿಯಲ್ಲಿ ಓದುತ್ತಿದ್ದು, ಈ ವರ್ಷ ಬಿಜೈ ಶಾಲೆಯಿಂದ ಅಶೋಕ ನಗರ ಶಾಲೆಗೆ ಶಿಫ್ಟ್ ಮಾಡಿಸಿದ್ದಾನೆ.ಮಂಗಳೂರಿನ ಕೆಪಿಟಿ ಸಮೀಪದ ಫ್ಲ್ಯಾಟ್‌ವೊಂದರಲ್ಲಿ ನೆಲೆಸಿದ್ದ ಚೌಗುಲೆ ಕುಟುಂಬ ಇತ್ತೀಚೆಗೆ ಸುರತ್ಕಲ್‌ನ ಇಂಡಿಪೆಂಡೆಂಟ್ ಮನೆಗೆ ಶಿಫ್ಟ್ ಆಗಿದೆ. ಮಗ ಸುರತ್ಕಲ್‌ನಿಂದಲೇ ಪ್ರತಿನಿತ್ಯ ಅಶೋಕನಗರ ಶಾಲೆಗೆ ಬಂದು ಹೋಗುತ್ತಿದ್ದ. ಚೌಗುಲೆ ಐಷಾರಾಮಿ ಜೀವನ ನಡೆಸುತ್ತಿದ್ದು, ಈತ ಕೇವಲ ವೇತನದಿಂದ ಇಷ್ಟೆಲ್ಲ ಗಳಿಕೆ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಆತನ ಜೀವನಶೈಲಿ ನೋಡಿದವರು ಹೇಳುತ್ತಿದ್ದಾರೆ.
ಮಂಗಳೂರಿನ ಕೆಪಿಟಿ ಬಳಿ ಫ್ಲ್ಯಾಟ್, ಮಂಗಳೂರಿನಲ್ಲಿಎರಡು ನಿವೇಶನ, ಸುರತ್ಕಲ್‌ನಲ್ಲಿ ಸ್ವಂತ ಮನೆ ಸೇರಿದಂತೆ ಅಪಾರ ಆಸ್ತಿಪಾಸ್ತಿಯನ್ನು ಚೌಗುಲೆ ಹೊಂದಿದ್ದಾನೆ ಎನ್ನಲಾಗಿದೆ. ವಿದೇಶದಿಂದ ಬರುವ ಮಾದಕ ವಸ್ತು, ಅಕ್ರಮ ಚಿನ್ನ ಸಾಗಾಟ ಜಾಲದ ನಂಟು ಈತ ಹೊಂದಿದ್ದಾನೆಯೇ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕಿದೆ. ವಿದೇಶಕ್ಕೆ ಹಾರಾಟ ಮಾಡುವ ವಿಮಾನದಲ್ಲಿ ಉದ್ಯೋಗಿಯಾಗಿದ್ದು ಕೊಂಡು ಈ ಅಕ್ರಮ ಚಟುವಟಿಕೆಗಳಿಗೆ ಬೆಂಬಲ ನೀಡಿದ್ದಾನೆಯೇ ಎಂಬ ಪ್ರಶ್ನೆಗೆ ಉನ್ನತ ಮಟ್ಟದ ತನಿಖೆಯಿಂದ ಉತ್ತರ ಸಿಗಬೇಕಾಗಿದೆ.