Connect with us

FILM

ಬಾಲ ನಟಿಯಾಗಿ ನಟಿಸಿದ್ದ ಚಿತ್ರದ ರೇಪ್ ಸೀನ್ ವೈರಲ್‌: ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ..!

ಕೊಚ್ಚಿ, ಅಕ್ಟೋಬರ್ 21: ಬಾಲ ನಟಿಯಾಗಿ ಅಭಿನಯಿಸಿದ ಚಿತ್ರವೊಂದರ ಕೆಲ ದೃಶ್ಯಗಳು ಯೂಟ್ಯೂಬ್ ಮತ್ತು ಪೋರ್ನ್ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಆಗಿರುವ ಕುರಿತು ಈ ನೂನು ವಿದ್ಯಾರ್ಥಿನಿ ಸೋನಾ ಎಂ ಅಬ್ರಹಾಂ ಅಸಮಾಧಾನ ಹೊರಹಾಕಿದ್ದಾರೆ.

ಮಲಯಾಳಂ “ಫಾರ್ ಸೇಲ್’ ಸಿನಿಮಾದಲ್ಲಿ ನಟಿಸುವ ನಿಮಗೆ 14 ವರ್ಷವಾಗಿತ್ತು. 7 ವರ್ಷಗಳ ಬಳಿಕ ಚಿತ್ರದ ಕೆಲ ಆಕ್ಷೇಪಾರ್ಹ ದೃಶ್ಯಗಳು ಪೋರ್ನ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಆಗಿವೆ. ಇದನ್ನು ನೋಡಿ ನಾನು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಸೋನಾ ನೋವು ತೋಡಿಕೊಂಡಿದ್ದಾರೆ. ವಿಡಿಯೋ ತೆಗೆದುಹಾಕಿಸಲು ನಾನು ಮತ್ತು ನನ್ನ ಕುಟುಂಬ ಎಲ್ಲ ಪ್ರಯತ್ನವನ್ನು ಮಾಡಿದೆವು. ಅಲ್ಲದೆ, ದೂರು ಸಹ ನೀಡಿದ್ದಾರೆ. ಆದರೆ, ಯಾವೊಬ್ಬ ಅಧಿಕಾರಿಯೂ ಸಹ ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಅಸಹ್ಯಕರ ಥೀಮ್ ಹೊಂದಿದ್ದ ಫಾರ್ ಸೇಲ್ ಚಿತ್ರದಲ್ಲಿ ನಟಿಸಿದ್ದ ನ್ನು ನೆನೆಸಿಕೊಂಡರೆ ಈಗಲೂ ನನ್ನ ಮೈ ನಡುಗುತ್ತದೆ. ಚಿತ್ರದಲ್ಲಿ ಸ್ತ್ರೀ ದ್ವೇಷ ಅಂಶಗಳಾಗಿದ್ದವು. ಅಲ್ಲದೆ, ಅದನ್ನು ವೈಭವೀಕರಿಸಲಾಯಿತು. ಚಿತ್ರದಲ್ಲಿ ಕಾಧಲ್ ಸಂಧ್ಯಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆಕೆಯ ತಂಗಿ ಮೇಲೆ ಅತ್ಯಾಚಾರ ನಡೆದಿದ್ದಕ್ಕೆಮನನೊಂದು ಅಕ್ಕ ಆತ್ಮಹತ್ಯೆ ಮಾಡಿಕೊಳ್ಳುವುದು ಚಿತ್ರದ ಕತೆಯಾಗಿತ್ತು ಎಂದು ಸೋನಾ ವಿವರಿಸಿದ್ದಾರೆ.

ಚಿತ್ರದಲ್ಲಿ ಸಂಧ್ಯಾಳ ತಂಗಿ ಪಾತ್ರವನ್ನು ಸೋನಾ ನಿರ್ವಹಿಸಿದ್ದ ರಂತೆ. ಆ ಚಿತ್ರದಲ್ಲಿ ನಟಿಸಿದ ಪಾಪ ಪ್ರಜ್ಞೆಯಿಂದ ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಹೋಗಿದೆ ಎನ್ನುತ್ತಾರೆ ಸೋನಾ, ಆದರೆ, ನಾನು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ. ನಾನು ನನ್ನ ಕಹಿ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಮರ್ಥನಾಗಿಸದ್ದೆನೆ. ತಂಗಿಯ ಮೇಲೆ ಅತ್ಯಾಚಾರ ವಾಗುವ ದೃಶ್ಯ ಚಿತ್ರಕ್ಕೆ ತುಂಬಾ ಅವಶ್ಯಕವೆಂದು ನಿರ್ದೇಶಕರು ಹೇಳಿದರು. ಅವಾಗ ನನಗೆ 14 ವರ್ಷ ವಯಸ್ಸಾಗಿತ್ತು. 150ಕ್ಕೂ ಹೆಚ್ಚು ಸದಸ್ಯರು ತುಂಬಿರುವ ಸಿನಿಮಾ ಸೆಟ್‌ನಲ್ಲಿ ಆ ದೃಶ್ಯದಲ್ಲಿ ನಟಿಸಲು ನನಗೆ ಹಿತವೆನಿಸುತ್ತಿಲ್ಲ ಎಂದು ಹೇಳಿದ್ದೆ. ಅಲ್ಲದೆ, ಆ ದೃಶ್ಯದ ಮಹತ್ವ ಅಥವಾ ಚಲನಚಿತ್ರ ಸಮಾಜಕ್ಕೆ ನೀಡುತ್ತಿರುವ ಸಂದೇಶವನ್ನು ಅರಿಯಲು ಸಾಧ್ಯವಾಗದ ವಯಸ್ಸಿನಲ್ಲಿದ್ದೆ ಎಂದು ಸೋನಾ ಫೇಸ್‌ಬುಕ್ ವಿಡಿಯೋದಲ್ಲಿ ಸುದೀರ್ಘವಾಗಿ ತಿಳಿಸಿದ್ದಾರೆ.

ಕೊನೆಗೂ ಆ ದೃಶ್ಯವನ್ನು ಕಲೂರ್‌ನಲ್ಲಿರುವ ನಿರ್ದೇಶಕರ ಕಚೇರಿಯಲ್ಲಿ ನಮ್ಮ ಪಾಲಕರು ಹಾಗೂ ಕೆಲವೇ ಸಿಬ್ಬಂದಿ ಸಮ್ಮುಖದಲ್ಲಿ ಚಿತ್ರೀಕರಿಸಲಾಯಿತು. ಚಿತ್ರೀಕರಣ ಮುಗಿದು ನನ್ನ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನುಮುಗಿಸಿ ಸಾಮಾನ್ಯ ಜೀವನಕ್ಕೆ ನಾನು ಮರಳಿದೆ. 11ನೇ ತರಗತಿ ಅಥವಾ ಪಿಯು ಆರಂಭದಲ್ಲಿ ಅತ್ಯಾಚಾರ ದೃಶ್ಯಗಳು ಯೂಟ್ಯೂಬ್ ಮತ್ತು ಪೋರ್ನ್ ವೆಬ್‌ಸೈಟ್‌ನಲ್ಲಿ ಸೋರಿಕೆಯಾಗಿತ್ತು. ಇದರಿಂದ ತುಂಬಾ ಒತ್ತಡಕ್ಕೆ ಸಿಲುಕಿದೆ, ಮಧ್ಯಮ ವರ್ಗದ ಕುಟುಂಬ ವಾದ್ದರಿಂದ ಹಾಗೂ ಆರ್ಥಿಕವಾಗಿ ದುರ್ಬಲವಾಗಿದ್ದರಿಂದ ತುಂಬಾ ಸಮಸ್ಯೆ ಎದುರಿಸಬೇಕಾಯಿತು.

ನನ್ನ ಶಿಕ್ಷಕರು, ಸಂಬಂಧಿಕರು ಮತ್ತು ಸ್ನೇಹಿತರು ನನ್ನನ್ನು ಅನುಮಾನದಿಂದ ಮಾಡಲು ಶುರು ಮಾಡಿದರು. ಆದರೆ, ನನ್ನ ಕುಟುಂಬ ನನ್ನ ಪ್ರತಿಭೆ ಹಾಗೂ ನನ್ನ ಮೇಲೆ ನಂಬಿಕೆ ಇಟ್ಟು ನನ್ನನ್ನು ತುಂಬಾ ಪ್ರೀತಿಸಿದವರು, ಆದರೆ, ಅವರು ಸಹ ಈಗ ಸಿನಿಮಾ ಎಂದರೆ  ಹೆದರುತ್ತಾರೆ, ಸಮಾಜದಿಂದ ಕೇಳಿಬಂದ ನಿಂದನೆಗಳಿಂದ ತುಂಬಾ ನೋವಾಯಿತು. ನನಗೆ ಒಂದು ರೀತಿಯ ಸಮಸ್ಯೆ ಇರುವಂತೆ ಜನರು ನನ್ನನ್ನು ನೋಡುತ್ತಾರೆ. ನನ್ನ ಟೀಚರ್ ನನ್ನನ್ನು ಒಂದು ರೀತಿಯಲ್ಲಿ ನೋಡುವುದು ನಿಜಕ್ಕೂ ನನಗೆ ತುಂಬಾ ನೋವಾಯಿತು ಎನ್ನುತ್ತಾರೆ ಸೋನಾ.

ಇಷ್ಟೇಲ್ಲ ನೋವು ಅನುಭವಿಸಿದರು ಗಟ್ಟಿಯಾದ ನಿಂತಿರುವ ಸೋನು ಒಂದು ಬಲವಾದ ಸಂದೇಶವನ್ನು ನೀಡಿದ್ದಾರೆ. ಏನಾದ್ರೂ ಕಳೆದುಕೊಂಡಿರುವುದಾಗಿ ಸೋನು ಭಾವಿಸುವುದೇ ಇಲ್ಲವಂತೆ, ಇನ್ನೊಬ್ಬರು ನನ್ನ ಮೇಲೇಕೆ ಅಷ್ಟೊಂದು ಕಾಳಜಿ ತೋರುತ್ತಿದ್ದಾರೆಂಬುದೇ ಆಕೆಗೆ ಆಶ್ಚರ್ಯ ವಂತೆ. ಈ ಪ್ರಕರಣದಲ್ಲಿ ನನ್ನದೇ ತಪ್ಪು ಎಂದು ಮನವರಿಕೆ ಮಾಡಲು ಆಪ್ತರು ಸಹ ಪ್ರಯತ್ನಿಸಿದ್ದಾರೆ ಎಂದು ಸೋನಾ ಹೇಳಿದ್ದಾರೆ.

ವಿಡಿಯೋ ತೆಗೆಯಲು ನಾನು ಮತ್ತು ನನ್ನ ಕುಟುಂಬ ಎಲ್ಲಾ ಸಂಸ್ಥೆಗಳಿಗೆ ಮನವಿ ಮಾಡಿದೆ. ಈ ಕ್ಷಣದವರೆಗೂ ನೀವು ಧನಾತ್ಮಕ ಸ್ಪಂದನೆ ಸ್ವೀಕರಿಸಿಲ್ಲ ಎಂದು ವ್ಯವಸ್ಥೆ ವಿರುದ್ಧ ಸೋನಾ ಅಸಮಾಧಾನ ಹೊರಹಾಕಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *